ಮಂಗಳವಾರ, ಏಪ್ರಿಲ್ 13, 2021
31 °C

ಕರಿಯಮ್ಮದೇವಿ ಜಾತ್ರಾ ಮಹೋತ್ಸವ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರದ ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಏ. 3ರಿಂದ 5ರವರೆಗೆ ಜರುಗಲಿದೆ.  ಏ. 3ರಂದು ಬೆಳಿಗ್ಗೆ 10 ಗಂಟೆಗೆ ಕರಿಯಮ್ಮದೇವಿಯ ಬೆಳ್ಳಿ ಉತ್ಸವ ಮೂರ್ತಿ ದರ್ಶನ ಜರುಗಲಿದೆ. ರಂಗೋಲಿ ಸ್ಪರ್ಧೆ, ಅಂತಾಕ್ಷರಿ, ವಚನ ಗಾಯನ ಸ್ಪರ್ಧೆ ಜರುಗಲಿದ್ದು, ನಗರಸಭೆ ಸದಸ್ಯ ಸಿ.ಕೆ. ಮಾಳಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು ಎಂದು ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಜೆ ಆರು ಗಂಟೆಗೆ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟನೆ, ಸಮುದಾಯ ಭವನದ ಅಡಿಗಲ್ಲು ಸಮಾರಂಭ ಹಾಗೂ ದಾನಿಗಳ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಸಚಿವ ಸಿ.ಸಿ. ಪಾಟೀಲ ಶಾಲಾ ಕಟ್ಟಡ ಉದ್ಘಾಟಿಸುವರು. ಶಾಸಕ ಶ್ರೀಶೈಲಪ್ಪ ಬಿದರೂರ ಸಮುದಾಯ ಭವನದ ಅಡಿಗಲ್ಲು ಸಮಾರಂಭ ನೆರವೇರಿಸುವರು. ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ, ಉಪಾಧ್ಯಕ್ಷೆ ಖಮರ್‌ಸುಲ್ತಾನ್ ನಮಾಜಿ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.ಏ. 4ರಂದು ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ನಂತರ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಸಿ.ಕೆ. ಮಾಳಶೆಟ್ಟಿ ಅಧ್ಯಕ್ಷತೆ ವಹಿಸುವರು. ಸದಸ್ಯರಾದ ಬಿ.ಬಿ. ಅಸೂಟಿ, ಅನಿಲ ಗರಗ, ಚನ್ನವೀರ ಮಳಗಿ, ಪಿಎಸ್‌ಐ ಆರ್.ಎಫ್. ದೇಸಾಯಿ ಅತಿಥಿಗಳಾಗಿ ಭಾಗವಹಿಸುವರು. ಎಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳಿಂದ ಗುರ್ಜಿ ನೃತ್ಯ, ಭರತನಾಟ್ಯ, ಗಜೇಂದ್ರಗಡದ ವಿಘ್ನೇಶ್ವರ ಡಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಂದ ಲಂಬಾಣಿ ನೃತ್ಯ, ಸುಗ್ಗಿ ನೃತ್ಯ, ನರಗುಂದ ನವೋದಯ ಡಿ.ಇಡಿ ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ, ಶಹನಾಜ್ ಮುದಕವಿ ಅವರಿಂದ ಕಥಕ್ ನೃತ್ಯ, ಸ್ನೇಹಾ ಶೆಟ್ಟಿ ಹಾಗೂ ಸಂಗಡಿಗರಿಂದ ಶಿವತಾಂಡವ ನೃತ್ಯ ನಡೆಯಲಿದೆ.ಏ. 5ರಂದು ಮಧ್ಯಾಹ್ನ 12.30ಕ್ಕೆ ಸಮಿತಿ ಕಾರ್ಯಾಲಯದ ಅಡಿಗಲ್ಲು ಸಮಾರಂಭವನ್ನು ಮಾಜಿ ಶಾಸಕ ಡಿ.ಆರ್. ಪಾಟೀಲ ನೆರವೇರಿಸುವರು. ಮೈಲಾರಪ್ಪ ಅರಣಿ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಕಡುಬಿನ ಕಾಳಗ ಜರುಗಲಿದೆ. ಸಂಜೆ 7 ಗಂಟೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಂದಾನಪ್ಪ ಪಟ್ಟಣಶೆಟ್ಟಿ ಉದ್ಘಾಟಿಸಲಿದ್ದು, ಎಸ್.ಎ. ಹೊಳೆಯಣ್ಣವರ ಅಧ್ಯಕ್ಷತೆ ವಹಿಸುವರು. ನಗರಸಭೆ ಪೌರಾಯುಕ್ತ ಎಸ್. ಶೇಖರಪ್ಪ ಅತಿಥಿಯಾಗಿ ಭಾಗವಹಿಸುವರು. ಸಮೃದ್ಧಿ ಪಟ್ಟಣಶೆಟ್ಟಿ ಹಾಗೂ ಚಿನ್ಮಯ ಪಟ್ಟಣಶೆಟ್ಟಿ ಅವರಿಂದ ಶ್ರೀಕೃಷ್ಣ ಸ್ತುತಿ, ಭರತನಾಟ್ಯ ಜರುಗಲಿದೆ. ಸ್ನೇಹ ಪಾಟೀಲ ಅವರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ನಂತರ ಬೆಟಗೇರಿಯ ಮೈಲಾರಲಿಂಗೇಶ್ವರ ದೊಡ್ಡಾಟ ಮೇಳದವರಿಂದ ‘ಕುರುಕ್ಷೇತ್ರ’ ದೊಡ್ಡಾಟ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿ.ಎಫ್. ಕೋಲ್ಕಾರ, ಎಚ್.ಬಿ. ಶಿರಗುಂಪಿ, ಎಸ್.ಬಿ. ಮೋಟಗಿ, ಯು.ಡಿ. ಅಂಗಡಿ, ಚಳಗೇರಿ, ವಿ.ಎಸ್. ಗವಿಮಠ, ಜಯರಾಮ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.