ಶುಕ್ರವಾರ, ಮೇ 7, 2021
26 °C

ಕರೀನಾ ಕಥಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಏಜೆಂಟ್ ವಿನೋದ್~ ಚಿತ್ರದ ಹಾಡೊಂದರಲ್ಲಿ ಕರೀನಾ ಕಪೂರ್ ಮುಜ್ರಾ ಶೈಲಿಯ ನೃತ್ಯ ಮಾಡಿದ್ದಾಳೆ. ಅದಕ್ಕಾಗಿ ಎರಡು ದಿನ ತಾಲೀಮು ನಡೆಸಿ ಶೂಟಿಂಗ್‌ಗೆ ಸಿದ್ಧಗೊಂಡ ಕರೀನಾ, ಚಿತ್ರೀಕರಣ ಸಮಯದಲ್ಲಿಯೂ ಸಾಕಷ್ಟು ರೀಟೇಕ್ ತೆಗೆದುಕೊಂಡು, ಕಡೆಗೂ ಯಶಸ್ವಿಯಾಗಿ ನರ್ತಿಸಿದಳಂತೆ.`ಮೂಲತಃ ನಾನು ಕಥಕ್ ನರ್ತನ ಕಲಿತವಳಲ್ಲ. ಕಥಕ್ ನರ್ತನದಲ್ಲಿ ಸೇರಿರುವ ಒಂದು ವಿಶಿಷ್ಟ ಶೈಲಿ ಮುಜ್ರಾ. ಅದೊಂದು ಕ್ಲಿಷ್ಟಕರ ನೃತ್ಯ~ ಎಂದು ಹೇಳಿರುವ ಕರೀನಾ `ಮಧುಬಾಲಾ, ರೇಖಾ, ಹೇಮಾಮಾಲಿನಿ, ಮಾಧುರಿ ದೀಕ್ಷಿತ್, ಐಶ್ವರ್ಯಾ ರೈ ಬಚ್ಚನ್ ಲೀಲಾಜಾಲವಾಗಿ ಈ ಶೈಲಿಯಲ್ಲಿ ಕುಣಿಯುವುದು ಕಂಡು ತನಗೇಕೆ ಇದು ಸಾಧ್ಯವಿಲ್ಲ ಎಂದುಕೊಂಡಿದ್ದೆ.ಆದರೆ ಇದು ತುಂಬಾ ಕಷ್ಟಕರ. ನೃತ್ಯ ಸಂಯೋಜಕಿ ಸರೋಜ್ ಖಾನ್ ಇಲ್ಲದಿದ್ದರೆ ನಾನು ಈ ನರ್ತನ ಮಾಡುತ್ತಲೇ ಇರಲಿಲ್ಲ~ ಎಂದು ಹೇಳಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾಳೆ. ಅಲ್ಲದೇ ಈ ಹಾಡಿನ ಶೂಟಿಂಗ್ ಮುಗಿಸಿ ಕರೀನಾ ಎರಡು ದಿನ ವಿಶ್ರಾಂತಿಯನ್ನೂ ಪಡೆದಿದ್ದಾಳೆ.`ಈ ನೃತ್ಯಕ್ಕೆ ಸಂಗೀತದ ಲಾಲಿತ್ಯದ ಅರಿವಿರಬೇಕು. ಅದನ್ನು ಆಲಿಸುತ್ತಾ ಅದರೊಳಗೆ ನಾವು ಸೇರಿಹೋದಾಗ ನೃತ್ಯ ಕಷ್ಟವಾಗುವುದಿಲ್ಲ~ ಎಂಬುದು ಕರೀನಾ ಅನುಭವದ ನುಡಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.