ಕರೀನಾ ಗುಣಗಾನ

7

ಕರೀನಾ ಗುಣಗಾನ

Published:
Updated:
ಕರೀನಾ ಗುಣಗಾನ

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ `ಏಜೆಂಟ್ ವಿನೋದ್~ ಚಿತ್ರದ ಬಗ್ಗೆ ಸೈಫ್ ಅಲಿ ಖಾನ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಅವರ ಮಾತಿನಲ್ಲಿ ಚಿತ್ರಕ್ಕಿಂತ ಹೆಚ್ಚಾಗಿ ಕರೀನಾ ಕಪೂರ್ ಪ್ರಶಂಸೆಯೇ ತುಂಬಿಕೊಂಡಿದ್ದು ವಿಶೇಷ.`ಕರೀನಾ ತುಂಬಾ ಚೆನ್ನಾಗಿ ಆಕ್ಷನ್ ದೃಶ್ಯಗಳಲ್ಲಿ ಭಾಗವಹಿಸಿದ್ದಾರೆ. ಕತೆ ಸಿದ್ಧವಾದಾಗ ಕರೀನಾಗೆ ಸ್ಟಂಟ್ ಮಾಡಲು ಅವಕಾಶ ಇರಲಿಲ್ಲ. ಚಿತ್ರ ಆರಂಭವಾದ ನಂತರ ಅವರು ಆಕ್ಷನ್‌ಗೆ ಮನಸ್ಸು ಮಾಡಿದರು. ಅದರಿಂದ ಆಕ್ಷನ್ ಸನ್ನಿವೇಶಗಳನ್ನು ಸೇರಿಸಲಾಯಿತು~ ಎಂದು ಕರೀನಾ ಸ್ಟಂಟ್‌ಗಳನ್ನು ಹೊಗಳಿರುವ ಸೈಫ್, ಆಕ್ಷನ್ ಎಂದರೆ ಮೂಗು ಮುರಿಯುವ ಅವರಿಗೆ ಅದು ಇಷ್ಟವಾಗಿದ್ದೇ ಒಂದು ಪವಾಡ ಎಂದಿದ್ದಾರೆ.

 

ಜೊತೆಗೆ ಕರೀನಾ ಸಾಹಸ ಪ್ರಧಾನ ದೃಶ್ಯಗಳಲ್ಲಿ ಉಳಿದೆಲ್ಲಾ ನಟಿಯರಿಗಿಂತ ಸುಂದರವಾಗಿ ಕಾಣುತ್ತಾರೆ ಎಂದು ಕಣ್ಣು ಮಿಟುಕಿಸಿದ್ದಾರೆ. `ದೆಹಲಿಯಲ್ಲಿ ನಡೆದ ಆಕ್ಷನ್ ಸನ್ನಿವೇಶದ ಚಿತ್ರೀಕರಣ ಸಮಯದಲ್ಲಿ ಕರೀನಾಗೆ ಸಣ್ಣ ಗಾಯವಾಯಿತು.

 

ಆದರೂ ಬಿಡದೆ ಚಿತ್ರೀಕರಣ ಮುಗಿಸಿದಳು~ ಎಂದು ಗೆಳೆತಿಯ ಬದ್ಧತೆಯನ್ನು ಪ್ರಶಂಸೆ ಮಾಡಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದ `ಏಜೆಂಟ್ ವಿನೋದ್~ ಚಿತ್ರಕ್ಕೆ ಸೈಫ್ ನಿರ್ಮಾಪಕ. ಮುಂಬೈ, ಮೊರಾಕ್ಕೊದಲ್ಲಿ ಚಿತ್ರೀಕರಣ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry