ಕರೀನಾ-ಚೋಪ್ರಾ ದೋಸ್ತಿ?

7

ಕರೀನಾ-ಚೋಪ್ರಾ ದೋಸ್ತಿ?

Published:
Updated:
ಕರೀನಾ-ಚೋಪ್ರಾ ದೋಸ್ತಿ?

ಈ ಹಿಂದೆ ಶಾಹಿದ್ ಕಪೂರ್‌ನ ಜೊತೆಗೆ ಬಾಂಧವ್ಯ ಕಳಚಿಕೊಂಡ ನಂತರ ಪ್ರಿಯಾಂಕಾ ಚೋಪ್ರಾ ಹಾಗೂ ಕರೀನಾ ಕಪೂರ್ ನಡುವೆ ಹೇಳಿಕೊಳ್ಳುವಂಥ ಸಂಬಂಧಗವೇನೂ ಉಳಿದಿರಲಿಲ್ಲ. ಆದರೆ ಒಂದೆರಡು ದಿನಗಳ ಹಿಂದೆ ಪ್ರಿಯಾಂಕಾ `ಹೀರೊಯಿನ್~ ಸೆಟ್‌ಗೆ ಭೇಟಿ ನೀಡಿದ್ದಾರೆ.ತಮ್ಮ `ಫ್ಯಾಶನ್~ ಚಿತ್ರ ತಂಡದೊಂದಿಗೆ ಸಾಕಷ್ಟು ಸಮಯ ಕಳೆದು ಬಂದಿದ್ದಾರೆ. ಇದೇ ಸಂದರ್ಭದಲ್ಲಿ `ಹೀರೊಯಿನ್~ ಚಿತ್ರದ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಕರೀನಾ ಜೊತೆಯೂ ಯಾವುದೇ ಕಹಿ ಇಲ್ಲದಂತೆ ಹರಟಿ ಬಂದಿದ್ದಾರೆ.ಮಧುರ್ ಭಂಡಾರ್ಕರ್, ಪ್ರಿಯಾಂಕಾ ಭೇಟಿಯ ನಂತರ ಪುಳಕಿತರಾಗಿದ್ದಾರೆ. ಪ್ರಿಯಾಂಕಾ ಸೆಟ್‌ನಲ್ಲಿ ಎಲ್ಲರೊಂದಿಗೆ ಅದೇ `ಜಲ್ವಾ~ ಉಳಿಸಿಕೊಂಡಿದ್ದಾರೆ ಎಂದು ಅವರು ಟ್ವೀಟಿಸಿದ್ದಾರೆ.ಕರೀನಾ ಕಪೂರ್ ಸಹ ಪ್ರಿಯಾಂಕಾಳೊಡನೆ ಒಂದಷ್ಟು ಹೊತ್ತು ಖುಷಿಯಾಗಿ ಕಳೆದೆ ಎಂದು ಬರೆದಿದ್ದಾರೆ. ಪ್ರಿಯಾಂಕಾ `ಫ್ಯಾಶನ್~ ತಂಡದ ಭೇಟಿ ಖುಷಿ ನೀಡಿತು. ಬೇಬೊ ಜೊತೆಗಿನ ಹರಟೆಯಿಂದಾಗಿ ಮನಸು ಹಗುರಾಯಿತು ಎಂದೂ ಟ್ವೀಟಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry