ಭಾನುವಾರ, ಡಿಸೆಂಬರ್ 15, 2019
26 °C
ಪಂಚರಂಗಿ

ಕರೀನಾ ಬಾಕಿ ಬಯಕೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರೀನಾ ಬಾಕಿ ಬಯಕೆಗಳು

ಬಾಲಿವುಡ್‌ ನಟಿ ಕರೀನಾ ಕಪೂರ್ ವೃತ್ತಿ ಮತ್ತು ಜೀವನದ ಬಗ್ಗೆ  ಫಿಲ್ಮ್‌ಫೇರ್‌ ಸಿನಿಮಾ ನಿಯತಕಾಲಿಕ ಈವರೆಗೆ ಸುಮಾರು ಇಪ್ಪತ್ತು ಬಾರಿ ಮುಖಪುಟ ಲೇಖನ ಪ್ರಕಟಿಸಿದೆ. ಅಲ್ಲದೆ ಆರು ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ ಕರೀನಾ ಮುಡಿಗೇರಿತ್ತು. ಆದರೂ ಇವಷ್ಟೇ ಸಾಲದು ಎಂದು ಕರೀನಾ ಹೇಳಿದ್ದಾರೆ.‘ನನ್ನನ್ನು ಇಪ್ಪತ್ತು ಬಾರಿ ಮುಖಪುಟದಲ್ಲಿ ಪ್ರಕಟಿಸಿದ  ಫಿಲ್ಮ್‌ಫೇರ್‌ ಪತ್ರಿಕೆಯ ಇಡೀ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ಇದು ಸಾಲದು’ ಎಂದು ಫಿಲ್ಮ್‌ಫೇರ್‌ನ ಇತ್ತೀಚಿನ ಸಂಚಿಕೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ 32ರ ಹರೆಯದ ಕರೀನಾ ಹೇಳಿದ್ದಾರೆ. ಆದರೆ ಇದನ್ನು ನೆಗೆಟಿವ್‌ ಆಗಿ ನೋಡಬೇಕಾಗಿಲ್ಲ. ಫಿಲ್ಮ್‌ಫೇರ್‌ ಬಗೆಗಿನ ತಮ್ಮ ಪ್ರೀತಿಯನ್ನು ಅವರು ಹೊರಹಾಕಿರುವುದು ಹೀಗೆ.‘ಫಿಲ್ಮ್‌ಫೇರ್‌ ಮುಖಪುಟದಲ್ಲಿ ಸ್ಥಾನ ಪಡೆಯುವುದು ಮತ್ತು ಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಭಾರತೀಯ ನಟ–ನಟಿಯ ಆಸೆಯಾಗಿದೆ’ ಎಂದಿರುವ ಕರೀನಾ ಇನ್ನಷ್ಟು ಮುಖಪುಟಗಳಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ. ‘ನಾನು ನನ್ನ 60ರ ವಯಸಿನಲ್ಲೂ, ಎಲ್ಲ ಸುಕ್ಕುಗಳ ಜೊತೆಗೇ ಫಿಲ್ಮ್‌ಫೇರ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ’ ಎಂದು ಬಯಕೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಕರೀನಾ ಫಿಲ್ಮ್‌ಫೇರ್‌ನ ಇತ್ತೀಚಿನ ಎರಡು ಸಂಚಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ.

ಕರಣ್‌ ಜೋಹರ್‌ ನಿರ್ಮಾಣದ ‘ಗೋರಿ ತೇರೆ ಪ್ಯಾರ್‌ ಮೇ’ ಕರೀನಾ ಅವರ ಮುಂದಿನ ಚಿತ್ರ.

 

ಪ್ರತಿಕ್ರಿಯಿಸಿ (+)