ಕರೀನಾ ಸಂಸಾರ ಚೆನ್ನಾಗೇ ಇದೆ!

7

ಕರೀನಾ ಸಂಸಾರ ಚೆನ್ನಾಗೇ ಇದೆ!

Published:
Updated:

ವಿವಾಹಾ ನಂತರ ತಮ್ಮ ಜೀವನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ನಟಿ ಕರೀನಾ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ಹೇಳಿದ್ದಾರೆ. ಅಂದಹಾಗೆ, ಸೈಫ್ ಮತ್ತು ಕರೀನಾ ಕಳೆದ ವರ್ಷ ಅಕೊ್ಟೋಬರ್‌ನಲ್ಲಿ  ಮದುವೆಯಾಗಿದ್ದರು. ‘ಸೈಫ್ ಹಾಗೂ ನನ್ನ ನಡುವೆ ಹೊಂದಾಣಿಕೆ ಇದ್ದುದರಿಂದ ಮದುವೆಯಾಗಲು ತೀರ್ಮಾನಿಸಿದೆವು.

ನಮ್ಮಿಬ್ಬರ ಆಯ್ಕೆ ಒಂದೇ ಆಗಿದ್ದು, ಎಲ್ಲಾ ರೀತಿಯಲ್ಲೂ ಸಮಾನ ಮನಸ್ಕರಾಗಿದ್ದೆವು. ಡೇಟಿಂಗ್‌ನಲ್ಲಿದ್ದಾಗ ಸೈಫ್ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಮುಂದೆಯೂ ಅವರು ಬದಲಾಗುವುದಿಲ್ಲ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಕರೀನಾ. ಮಾಧ್ಯಮವರು ಹಾಗೂ ಜನರು ಮದುವೆಯನ್ನು ದೊಡ್ಡ ವಿಷಯವಾಗಿ ಬಿಂಬಿಸುತ್ತಾರೆ. ಆದರೆ ನಿಜ ಜೀವನವೇ ಭಿನ್ನವಾಗಿರುತ್ತದೆ.

ನಮ್ಮಿಬ್ಬರ ನಡುವೆ ಯಾವುದೇ ನಿಬಂಧನೆಗಳಿಲ್ಲ. ಕೆಲವೊಮ್ಮೆ ಜನ ಕೇಳುವ ಪ್ರಶ್ನೆಗಳು ನನಗೆ ಆಚ್ಚರಿ ಉಂಟುಮಾಡುತ್ತವೆ. ಮದುವೆಯಾದ ನಂತರದ ನಿಮ್ಮಲ್ಲಿ ಏನಾದರೂ ಭಿನ್ನಾಭಿಪ್ರಾಯ ಇದೆಯೇ, ಬದಲಾವಣೆ ಆಗಿದೆಯೇ ಎಂಬಂಥ ಪ್ರಶ್ನೆಗಳು ಅರ್ಥಹೀನ ಎಂಬುದು ಅವರ ಅಭಿಪ್ರಾಯ. ‘ಮದುವೆಗೂ ಮೊದಲು ನನ್ನ ಭಾವನೆಗಳು ಹೇಗಿದ್ದವೋ ಈಗಲೂ ಹಾಗೆಯೇ ಇದ್ದು, ಇನ್ನಷ್ಟು ಜವಬ್ದಾರಿ ಹೆಚ್ಚಾಗಿದೆ.

ಆದರೆ ಚಿತ್ರರಂಗಕ್ಕೂ ವಿವಾಹದ ನಂತರದ ಜೀವನಕ್ಕೂ ಯಾವುದೇ ವ್ಯತ್ಯಾಸ ಆಗಿಲ್ಲ. ಬಾಲ್ಯದಲ್ಲಿಯೇ ನಾನು ಜವಬ್ದಾರಿಯುತ ಹುಡುಗಿಯಾಗಿದ್ದೆ. ಆಗ ನನ್ನ ಮೇಲೆ ಇಡೀ ಕುಟುಂಬದ ಜವಾಬ್ದಾರಿ ಇತ್ತು. ಮೊದಲು ನನ್ನ ತಾಯಿ, ನಂತರ ಅಕ್ಕ ಕರಿಷ್ಮಾ, ಈಗ ಸೈಫ್‌. ಗಂಡ ಹೊಣೆಗಾರಿಕೆ ಇರುವ ನಟನಷ್ಟೇ ಅಲ್ಲ, ಒಳ್ಳೆಯ ವ್ಯಕ್ತಿ’ ಎಂಬುದು ಕರೀನಾರ ಅನುಭವದ ನುಡಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry