ಕರುಣಾನಿಧಿಗೆ 88: ಸರಳ ಆಚರಣೆ

ಶನಿವಾರ, ಜೂಲೈ 20, 2019
27 °C

ಕರುಣಾನಿಧಿಗೆ 88: ಸರಳ ಆಚರಣೆ

Published:
Updated:

ಚೆನ್ನೈ, (ಪಿಟಿಐ): ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು 88 ನೇ ಹುಟ್ಟುಹಬ್ಬವನ್ನು ಶುಕ್ರವಾರ ಸರಳವಾಗಿ ಆಚರಿಸಿಕೊಂಡರು.`ಕೆಟ್ಟವರೊಂದಿಗಿನ ಗೆಳೆತನ ತೊಂದರೆಗೆ ಕಾರಣ~ ಎಂದು ಕಾರ್ಯಕರ್ತರಿಗೆ ನೀಡಿರುವ ಸಂದೇಶದಲ್ಲಿ ತಿಳಿಸಿದ್ದಾರೆ.``ಸಾಮಾಜಿಕ ಮತ್ತು ರಾಜಕೀಯ ಜಾಗೃತಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡವರು `ಕೆಟ್ಟವರೊಂದಿಗಿನ ಗೆಳೆತನ ತೊಂದರೆಯಲ್ಲಿ ಕೊನೆಯಾಗುತ್ತದೆ~ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಮುಂದಕ್ಕೆ ಹೋಗಬೇಕು~~ ಎಂದು ಕರುಣಾನಿಧಿ ವರದಿಗಾರರಿಗೆ ತಿಳಿಸಿದರು.ಸಾಮಾನ್ಯವಾಗಿ ಕರುಣಾನಿಧಿ ಅವರು ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರಲ್ಲದೆ ಹುಟ್ಟುಹಬ್ಬದ ಸಮಾರಂಭವು ಪಕ್ಷದ ಬಲಪ್ರದರ್ಶನದ ವೇದಿಕೆಯಂತೆ ಕಂಡುಬರುತ್ತಿತ್ತು.2 ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಕರುಣಾನಿಧಿ ಅವರ ಪುತ್ರಿ ಕನಿಮೊಳಿ ಮತ್ತು ಪಕ್ಷದ ಆಪ್ತ ಸದಸ್ಯ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಅವರು ತಿಹಾರ್ ಜೈಲಿನಲ್ಲಿರುವ ಕಾರಣ ಕರುಣಾನಿಧಿ ಅವರು ಹುಟ್ಟುಹಬ್ಬಕ್ಕೆ ಮಹತ್ವ ನೀಡಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry