ಕರುಣಾ ವಿರುದ್ಧ ಜಯಾ ಮೊಕದ್ದಮೆ

ಶುಕ್ರವಾರ, ಮೇ 24, 2019
23 °C

ಕರುಣಾ ವಿರುದ್ಧ ಜಯಾ ಮೊಕದ್ದಮೆ

Published:
Updated:

ಚೆನ್ನೈ (ಪಿಟಿಐ): ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಮತ್ತು ಆ ಪಕ್ಷದ ಮುಖವಾಣಿ `ಮುರಸೋಳಿ~ ಪತ್ರಿಕೆ ವಿರುದ್ಧ  ತಮಿಳುನಾಡು ಮುಖ್ಯಮಂತ್ರಿ  ಜೆ ಜಯಲಲಿತಾ ಅವರು ಇಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.ಜುಲೈ 30ರಂದು ಪತ್ರಿಕೆಯಲ್ಲಿ ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಕಟವಾಗಿರುವುದಾಗಿ ಜಯಲಲಿತಾ ಆರೋಪಿಸಿದ್ದಾರೆ.ಜಯಲಲಿತಾ ಅವರು ಕೊಡನಾಡುವಿನಲ್ಲಿ ಎರಡು ತಿಂಗಳು ಉಳಿದುಕೊಂಡಿದ್ದ ಬಗ್ಗೆ ಕರುಣಾನಿಧಿ ಅವರು ನೀಡಿದ್ದ ಹೇಳಿಕೆ ವಿರುದ್ಧ ಜಯಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.ಮುಖ್ಯಮಂತ್ರಿ ಎರಡು ತಿಂಗಳ ಕಾಲ ರಜೆಯಿಂದ ತೆರಳಿರುವುದು ಮತದಾರರ ಆತಂಕಕ್ಕೆ ಕಾರಣವಾಗಿದೆ ಎಂದು ಕರುಣಾನಿಧಿ ಹೇಳಿದ್ದಾಗಿ ಜಯಲಲಿತಾ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸಿಪಿಪಿ) ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry