ಗುರುವಾರ , ಮಾರ್ಚ್ 4, 2021
29 °C

ಕರುಮಾರಿಯಮ್ಮ ಕರಗ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರುಮಾರಿಯಮ್ಮ ಕರಗ ಮಹೋತ್ಸವ

ಚಿಕ್ಕಮಗಳೂರು: ನಗರದ ತಮಿಳು ಕಾಲೊನಿಯ ಕರುಮಾರಿಯಮ್ಮ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹರಕೆ ಹೊತ್ತ ಭಕ್ತರು ಶ್ರದ್ಧಾಭಕ್ತಿಯಿಂದ ಕರಗ ಮಹೋತ್ಸವ ಆಚರಿಸಿದರು.ಬೆಳಿಗ್ಗೆಯೇ ಕರುಮಾರಿಯಮ್ಮನವರಿಗೆ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ದಂಟರಮಕ್ಕಿಯ ಕೆರೆಕೋಡಮ್ಮ ದೇವಾಲಯದ ಮುಂಭಾಗದಿಂದ ಅಲಂಕೃತಗೊಂಡ ಕರಗ ಹಾಗೂ ವಾಹನವನ್ನು ಭಕ್ತರು ಬೆನ್ನಿಗೆ ಹಾಕಿಕೊಂಡಿದ್ದ ಕಬ್ಬಿಣದ ಕೊಂಡಿಯಿಂದ ವಾಹನಗಳನ್ನು ಎಳೆದು, ಭಕ್ತಿ ಪ್ರದರ್ಶಿಸಿದರು.ಹದಿನೈದರ ಹರೆಯದ 3ಬಾಲಕರು ಆಟೋ ಎಳೆದು ತಂದರೆ, ಓಮ್ನಿ ಕಾರನ್ನು ಇಬ್ಬರು ವ್ಯಕ್ತಿಗಳು, ಮಿನಿ ಲಾರಿಯನ್ನು ನಾಲ್ವರು ಭಕ್ತರು, ಅಕ್ಕಿ ಕಾವಡಿಯನ್ನು ಭಕ್ತರೊಬ್ಬರು ಎಳೆದರು. ರಥಕ್ಕೆ ಹೂಡಿದ ಅಶ್ವಗಳನ್ನು ನೆನಪಿಸುವಂತೆ ಐವರು ಭಕ್ತರು ದೊಡ್ಡ ಲಾರಿ ಎಳೆದು, ಜಾತ್ರಾ ಮಹೋತ್ಸವದಲ್ಲಿ ನೆರೆದಿದ್ದವರನ್ನು ಚಕಿತಗೊಳಿಸಿದರು. ಸುಮಾರು ಏಳರಿಂದ 10 ವರ್ಷದೊಳಗಿನ ಬಾಲಕಿಯರು ಬಾಯಿಗೆ ತ್ರಿಶೂಲ ಧರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡು ಹರಕೆ ಸಮರ್ಪಿಸಿದರು.ಕಬ್ಬಿಣದ ಕೊಂಡಿಗಳನ್ನು ಮೈ ಮೇಲೆ ಚುಚ್ಚಿಕೊಂಡಿದ್ದ ಭಕ್ತರು ಹಗ್ಗದ ನೆರವಿನಿಂದ ಸುಮಾರು 25 ಅಡಿ ಎತ್ತರದಲ್ಲಿ ತೇಲುತ್ತಾ ಸಂಜೆ ಹೊತ್ತು ಅಮ್ಮನವರ ಕರಗಕ್ಕೆ ಹಾರಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.