ಮಂಗಳವಾರ, ಮೇ 18, 2021
22 °C

ಕರೆಂಟ್ ಹೊಡೆದೀತು ಜೋಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರ್ಡ್ ನಂ. 43ಕ್ಕೆ ಸೇರಿದ ನಂದಿನಿ ಲೇಔಟ್ ಬಿಎಚ್‌ಇಎಲ್ ಉದ್ಯಾನದ ಟ್ರಾನ್ಸ್‌ಫಾರ‌್ಮರ್ ಸುತ್ತ ಗಿಡಬಳ್ಳಿಗಳು ಆವರಿಸಿ, ವಿಪರೀತ ಹಾವು ಹುಳು ಹುಪ್ಪಡಿ ಸೇರಿಕೊಂಡಿವೆ.

 

ಬೆಸ್ಕಾಂಗೆ ದೂರು ನೀಡಿ 3-4 ವಾರ ಕಳೆದರೂ ಕ್ರಮ ತೆಗೆದುಕೊಂಡಿಲ್ಲ. ಉದ್ಯಾನಕ್ಕೆ ಮಕ್ಕಳು, ಹೆಣ್ಣು ಮಕ್ಕಳು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಏನಾದರೂ ಅಪಾಯ ಆಗುವ ಮೊದಲೇ ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಲು ಕೋರಿದೆ.ಇದಲ್ಲದೆ ಸರಸ್ವತಿಪುರದಿಂದ ನಂದಿನಿ ಲೇಔಟ್‌ಗೆ ಬರುವ ತಿರುವಿನಲ್ಲಿ ವಿಪರೀತ ಕಸ ಸಂಗ್ರಹವಾಗುತ್ತದೆ. ಇಲ್ಲಿ ಕಸ ಹಾಕದಂತೆ ಏನಾದರೂ ಮಾಡಬೇಕು. ಸರಸ್ವತಿಪುರಂ ಕಿರಿದಾದ ರಸ್ತೆಯಲ್ಲಿ `ಫಿಶ್ ಮಾರ್ಕೆಟ್~ ಇದೆ.

 

ಇದರಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. ಬಿಬಿಎಂಪಿಗೆ ಎಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.