ಕರೆನ್ಸಿ ಅಪಮೌಲ್ಯದಿಂದ ಅಸ್ಥಿರತೆ

7
ಮಾರುಕಟ್ಟೆ ಬಿಕ್ಕಟ್ಟು; ಬಿಐಎಸ್‌ ಅಧ್ಯಯನ

ಕರೆನ್ಸಿ ಅಪಮೌಲ್ಯದಿಂದ ಅಸ್ಥಿರತೆ

Published:
Updated:

ಲಂಡನ್‌(ಪಿಟಿಐ): ಡಾಲರ್‌ ವಿರುದ್ಧ ರೂಪಾಯಿ ಸೇರಿ­ದಂತೆ ಏಷ್ಯಾದ ಹಲವು ಕರೆನ್ಸಿಗಳು ಅಪಮೌಲ್ಯಗೊಂಡಿವೆ. ಇದು ಭಾರ­ತವೂ ಸೇರಿದಂತೆ ಪ್ರವರ್ಧ­ಮಾನಕ್ಕೆ ಬರುತ್ತಿರುವ ಹಲವು ದೇಶಗಳ ಹಣಕಾಸು ಮಾರುಕಟ್ಟೆ ಮೇಲೆ ತೀವ್ರವಾದ ಪರಿಣಾಮ ಬೀರಿದೆ ಎಂದು ‘ಬ್ಯಾಂಕ್‌ ಫಾರ್‌ ಇಂಟರ್‌ನ್ಯಾಷನಲ್‌ ಸೆಟಲ್‌ಮೆಂಟ್ಸ್‌’(ಬಿಐಎಸ್‌) ಇತ್ತೀಚೆಗೆ ನಡೆಸಿದ ಅಧ್ಯಯನ ತಿಳಿಸಿದೆ.ಕರೆನ್ಸಿ ಅಪಮೌಲ್ಯವು ಭಾರತದಂತಹ ಪ್ರಮುಖ ದೇಶಗಳಲ್ಲಿ ತೀವ್ರವಾದ ಅಸ್ಥಿರತೆ ಸೃಷ್ಟಿಸಿದೆ. ಷೇರುಪೇಟೆಯೂ ಇಳಿಮುಖವಾಗಿದೆ. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ(ಸಿಎಡಿ) ತಗ್ಗಿಸಲು ಆಮದು ಮೇಲೆ ನಿಯಂತ್ರಣ ವಿಧಿಸಿರುವುದರಿಂದ ಸ್ಥಳೀಯ ಮಾರು­ಕಟ್ಟೆಯಲ್ಲಿ ಏರುಪೇರು ಉಂಟಾಗಿದೆ.ಸರಕುಗಳ ಪೂರೈಕೆ–ಬೇಡಿಕೆ ನಡುವಿನ ಅಂತರ ಹೆಚ್ಚಿದೆ. ಒಟ್ಟಾರೆ ಮೇ 3ರಿಂದ ಜುಲೈ 5ರ ನಡುವಿನ ಅವಧಿಯಲ್ಲಿ ‘ಬ್ರಿಕ್’ ದೇಶಗಳ ಕರೆನ್ಸಿ ಮೌಲ್ಯ ಡಾಲರ್‌ ವಿರುದ್ಧ ಶೇ 3ರಿಂದ 13ರಷ್ಟು ಕುಸಿತ ಕಂಡಿದೆ ಎಂದು ‘ಬಿಐಎಸ್‌’ನ ತ್ರೈಮಾಸಿಕ ವರದಿ ಹೇಳಿದೆ.ಕರೆನ್ಸಿ ಅಪಮೌಲ್ಯದಿಂದ ಭಾರತ, ಬ್ರೆಜಿಲ್‌, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಟರ್ಕಿ ದೇಶಗಳಲ್ಲಿಯೂ ಚಾಲ್ತಿ ಖಾತೆ ಕೊರತೆ ಹೆಚ್ಚಿದೆ. ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಮತ್ತು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಹಣದುಬ್ಬರ ಏರಿಕೆ ಕಂಡಿವೆ. ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆಗಳು  ರೇಟಿಂಗ್ ತಗ್ಗಿಸಿರು­ವುದರಿಂದ ಈ ದೇಶಗಳಲ್ಲಿ ಹೊಸ ಹೂಡಿಕೆ ಪ್ರಮಾಣ ಕೂಡ ಗಣನೀ­ಯವಾಗಿ ತಗ್ಗಿದೆ ಎಂದು ಈ ವರದಿ ವಿಶ್ಲೇಷಿಸಿದೆ.ಡಾಲರ್ ವಿರುದ್ಧ ರೂಪಾಯಿ ವಿನಿ­ಮಯ ಮೌಲ್ಯ ಆ. 28ರಂದು ಸಾರ್ವ­ಕಾಲಿಕ ದಾಖಲೆ ಮಟ್ಟವಾದ  ರೂ68.85ಕ್ಕೆ ಕುಸಿದಿತ್ತು. ನಂತರದ ದಿನಗಳಲ್ಲಿ  ಕೇಂದ್ರ ಸರ್ಕಾರ ಚಿನ್ನ ಮತ್ತು ಬೆಳ್ಳಿ ಆಮದು ಮೇಲೆ ವಿಧಿಸಿರುವ ನಿರ್ಬಂಧ, ಹಣಕಾಸು ಮಾರುಕಟ್ಟೆ ಚೇತರಿಕೆಗೆ ‘ಆರ್‌ಬಿಐ’ ಪ್ರಕಟಿಸಿದ ಕ್ರಮಗಳು ರೂಪಾಯಿ ಮೌಲ್ಯ ಚೇತರಿಸಿಕೊ­ಳ್ಳುವಂತೆ ಮಾಡಿವೆ ಎಂದು ‘ಬಿಐಎಸ್‌’ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry