ಕರೆ ದರ ಹೆಚ್ಚಳ ಮುನ್ಸೂಚನೆ!

7

ಕರೆ ದರ ಹೆಚ್ಚಳ ಮುನ್ಸೂಚನೆ!

Published:
Updated:
ಕರೆ ದರ ಹೆಚ್ಚಳ ಮುನ್ಸೂಚನೆ!

ನವದೆಹಲಿ (ಪಿಟಿಐ):ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿರುವ ಹೊಸ `ತರಂಗಾಂತರ ದರ~ ಪ್ರಸ್ತಾವವನ್ನು ಸರ್ಕಾರ ಅಂಗೀಕರಿಸಿದರೆ, ಕೆಲವು ಆಯ್ದ ದೂರವಾಣಿ ವೃತ್ತಗಳಲ್ಲಿ ಮೊಬೈಲ್ ಕರೆ ದರವನ್ನು ಎರಡು ಪಟ್ಟು ಹೆಚ್ಚಿಸುವುದು ಅನಿವಾರ್ಯ ಎಂದು ಮೊಬೈಲ್ ಸೇವಾ ಸಂಸ್ಥೆಗಳು ಮುನ್ಸೂಚನೆ ನೀಡಿವೆ.ಮಂಗಳವಾರ ಇಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ-ಸಂವಹನ ಖಾತೆ ಸಚಿವ ಕಪಿಲ್ ಸಿಬಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ದೂರವಾಣಿ ಸೇವಾ ಸಂಸ್ಥೆಗಳ `ಸಿಇಒ~ಗಳು `ಕರೆದರ ದುಪ್ಪಟ್ಟು~ ಸೂಚನೆ ನೀಡಿದರು.`ಟ್ರಾಯ್~ ಪ್ರಸ್ತಾವವನ್ನು ಸರ್ಕಾರ ಅಂಗೀಕರಿಸಿದರೆ, ಖಂಡಿತವಾಗಿಯೂ ಕೆಲವು ದೂರವಾಣಿ ವೃತ್ತಗಳಲ್ಲಿ ಕರೆ ದರವನ್ನು ಎರಡು ಪಟ್ಟಿಗಿಂತ ಹೆಚ್ಚು ಮಾಡುತ್ತೇವೆ ಎಂದು ಭಾರ್ತಿ ಏರ್‌ಟೆಲ್ ಸಿಇಒ ಸಂಜಯ್ ಕಪೂರ್ ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry