ಶನಿವಾರ, ನವೆಂಬರ್ 23, 2019
18 °C

ಕರ್ಣಾಟಕ ಬ್ಯಾಂಕ್‌ಗೆ ಐಎಸ್‌ಒ ಪ್ರಮಾಣ ಪತ್ರ

Published:
Updated:

ಬೆಂಗಳೂರು: ಬ್ಯಾಂಕಿಂಗ್ ವಹಿವಾಟು ಮತ್ತು ದತ್ತಾಂಶ ನಿರ್ವಹಣೆಯಲ್ಲಿ ಅಳವಡಿಸಿಕೊಂಡಿರುವ ಅತ್ಯುತ್ತಮ ತಂತ್ರಜ್ಞಾನಕ್ಕಾಗಿ ಕರ್ಣಾಟಕ ಬ್ಯಾಂಕ್‌ಗೆ ಜಾಗತಿಕ `ಐಎಸ್‌ಒ' ಪ್ರಮಾಣಪತ್ರ ಲಭಿಸಿದೆ.  ಕರ್ಣಾಟಕ ಬ್ಯಾಂಕ್ ಬೆಂಗಳೂರು ದತ್ತಾಂಶ ಕೇಂದ್ರದಲ್ಲಿ ಅಳವಡಿಸಿಕೊಂಡಿರುವ ಭದ್ರತೆ ನಿರ್ವಹಣೆ ವ್ಯವಸ್ಥೆ (ಐಎಸ್‌ಎಂಎಸ್), ಮಂಗಳೂರು ಮುಖ್ಯ ಕಚೇರಿಯಲ್ಲಿನ ಮಾಹಿತಿ ತಂತ್ರಜ್ಞಾನ ಸೌಲಭ್ಯ `ಐಎಸ್‌ಒ' ಮನ್ನಣೆಗೆ ಪಾತ್ರವಾಗಿವೆ.`ರಾಷ್ಟ್ರೀಯ ಗುಣಮಟ್ಟ ಖಾತರಿ (ಎನ್‌ಕ್ಯುಎ) ಸಂಸ್ಥೆಯ ಈ ಪ್ರಮಾಣಪತ್ರದ ಅವಧಿ 3 ವರ್ಷ. ಇದೊಂದು ಜಾಗತಿಕ ಮನ್ನಣೆ. ಗ್ರಾಹಕರಿಗೆ ಬ್ಯಾಂಕಿಂಗ್ ವಹಿವಾಟಿನಲ್ಲಿ ಸುರಕ್ಷತೆ ಖಾತರಿಪಡಿಸುತ್ತದೆ' ಎಂದು ಬ್ಯಾಂಕ್ ಅಧ್ಯಕ್ಷ ಪಿ. ಜಯರಾಂ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)