ಕರ್ಣಾಟಕ ಬ್ಯಾಂಕ್ ಬಡ್ಡಿ ದರ ಹೆಚ್ಚಳ

7

ಕರ್ಣಾಟಕ ಬ್ಯಾಂಕ್ ಬಡ್ಡಿ ದರ ಹೆಚ್ಚಳ

Published:
Updated:

ಮಂಗಳೂರು: ಉಳಿತಾಯ ಖಾತೆ ಬಡ್ಡಿ ದರದ ಮೇಲಿನ ನಿಯಂತ್ರಣವನ್ನು ರಿಸರ್ವ್ ಬ್ಯಾಂಕ್ ಮುಕ್ತಗೊಳಿಸಿರುವ ಹಿನ್ನೆಲೆಯಲ್ಲಿ, ಕರ್ಣಾಟಕ ಬ್ಯಾಂಕ್ ತಕ್ಷಣದಿಂದ ಜಾರಿಗೆ ಬರುವಂತೆ ಉಳಿತಾಯ ಖಾತೆಯ ಬಡ್ಡಿ ದರವನ್ನು ಶೇ 5ಕ್ಕೆ ಏರಿಸಿದೆ.ಬ್ಯಾಂಕ್‌ನ ಈ ಕ್ರಮ ಎಲ್ಲಾ ಗ್ರಾಹಕರಿಗೂ ಲಭ್ಯವಾಗಲಿದ್ದು, ಪ್ರತಿದಿನದ ಉಳಿತಾಯಕ್ಕೂ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಆರು ತಿಂಗಳ ಬದಲಿಗೆ ಮೂರು ತಿಂಗಳಿಗೇ ಖಾತೆಗೆ ಬಡ್ಡಿ ಜಮಾ ಮಾಡಲಾಗುತ್ತದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry