ಕರ್ಣಾಟಕ ಬ್ಯಾಂಕ್ ಲಾಭ ರೂ.200 ಕೋಟಿ

7

ಕರ್ಣಾಟಕ ಬ್ಯಾಂಕ್ ಲಾಭ ರೂ.200 ಕೋಟಿ

Published:
Updated:

ಮಂಗಳೂರು: ಕರ್ಣಾಟಕ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ರೂ.200.62 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 120.80 ಪ್ರಗತಿಯಾಗಿದೆ.ಕಳೆದ ಆರು ತಿಂಗಳಲ್ಲಿ ಠೇವಣಿ ರೂ.28,489 ಕೋಟಿಯಿಂದ 33,968 ಕೋಟಿಗೆ, ಸಾಲ ವಿತರಣೆ ರೂ.19,067ರಿಂದ 22,395 ಕೋಟಿಗೆ ಹೆಚ್ಚಿದೆ. ಚಾಲ್ತಿ ಮತ್ತು ಉಳಿತಾಯ ಖಾತೆ ಮೊತ್ತ ರೂ.6,744 ಕೋಟಿಯಿಂದ 7,970 ಕೋಟಿಗೆ ಹೆಚ್ಚಿದೆ. ಸಾಲ ಮರುಪಾವತಿ ಉತ್ತಮವಾಗಿರುವುದೇ ಈ ಸಾಧನೆಗೆ ಕಾರಣ ಎಂದು ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಂ ಭಟ್  ತಿಳಿಸಿದ್ದಾರೆ.2ನೇ ತ್ರೈಮಾಸಿಕ: ಸೆ. 30ಕ್ಕೆ ಕೊನೆಗೊಂಡ 2ನೇ ತ್ರೈಮಾಸಿಕದಲ್ಲಿ ರೂ.117.19 ಕೋಟಿ ನಿವ್ವಳ ಲಾಭವಾಗಿದೆ (ಶೇ 185.27 ಪ್ರಗತಿ) ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry