ಬುಧವಾರ, ಜೂನ್ 16, 2021
27 °C

ಕರ್ಣಾಟಕ ಬ್ಯಾಂಕ್ ಶೀಘ್ರವೇ ಶಾಖೆಗಳ ಸಂಖ್ಯೆ 500ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಈ ಆರ್ಥಿಕ ವರ್ಷದ ಅಂತ್ಯದೊಳಗೆ ಕರ್ಣಾಟಕ  ಬ್ಯಾಂಕ್ ರೂ 54,000 ಕೋಟಿಗಳ ವ್ಯವಹಾರದ ಗುರಿ ಹೊಂದಿದೆ~ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್ ಅವರು ಬುಧವಾರ ಇಲ್ಲಿ ತಿಳಿಸಿದರು.`ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕಿನ ವ್ಯವಹಾರ ರೂ 50,000 ಕೋಟಿಗಳಿಂದ ರೂ 50,500 ಕೋಟಿಗಳಿಗೆ ಏರಿದೆ. ಇದರಲ್ಲಿ ರೂ 32,500 ಕೋಟಿ ಠೇವಣಿ ಒಳಗೊಂಡಿದೆ. ಹುಬ್ಬಳ್ಳಿ ವಲಯದಲ್ಲಿ ಒಟ್ಟು 55 ಶಾಖೆಗಳಿದ್ದು ಕಳೆದ 2 ವರ್ಷಗಳಲ್ಲಿ ವ್ಯವಹಾರ ದ್ವಿಗುಣಗೊಂಡಿದೆ.ಕಳೆದ ವರ್ಷ ಈ ವಲಯದಲ್ಲಿ ಬ್ಯಾಂಕಿನ ವ್ಯವಹಾರ ರೂ 1,800 ಕೋಟಿ  ಇತ್ತು. ಇದು ಈ ವರ್ಷ ್ಙ 3,000 ಕೋಟಿ  ಆಗಿದ್ದು ವರ್ಷಾಂತ್ಯದಲ್ಲಿ ರೂ 3,200 ಕೋಟಿಗೆ ಏರಿಸುವ ಗುರಿ ಇದೆ~ ಎಂದು ತಿಳಿಸಿದರು.

500ನೇ ಶಾಖೆ: `ಬ್ಯಾಂಕ್ ಈಗ ಒಟ್ಟು 404 ಶಾಖೆಗಳನ್ನು ಹೊಂದಿದೆ. ಮಾರ್ಚ್ ಅಂತ್ಯದೊಳಗೆ ಇದು 500ರ ಗಡಿಯನ್ನು ದಾಟಲಿದೆ.ಉಡುಪಿ ಜಿಲ್ಲೆಯ ಶಿರೂರಿನಲ್ಲಿ ಬ್ಯಾಂಕಿನ 500ನೇ ಶಾಖೆಯ ಉದ್ಘಾಟನೆ ಇದೇ 29ರಂದು ನಡೆಯಲಿದೆ~ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.