ಕರ್ತವ್ಯಲೋಪದ ಅಧಿಕಾರಿಗಳ ವಿರುದ್ಧ ಕ್ರಮ: ಎಚ್ಚರಿಕೆ

7

ಕರ್ತವ್ಯಲೋಪದ ಅಧಿಕಾರಿಗಳ ವಿರುದ್ಧ ಕ್ರಮ: ಎಚ್ಚರಿಕೆ

Published:
Updated:

ಕೆ.ಆರ್.ನಗರ: ‘ಸಾರ್ವಜನಿಕರ ಕೆಲಸ ಗಳನ್ನು ಮಾಡಿಕೊಡದ ಅಧಿಕಾರಿ ಗಳನ್ನು ಎತ್ತಂಗಡಿ ಮಾಡಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಎಚ್ಚರಿಸಿದರು.ಪಟ್ಟಣದ ಕೃಷ್ಣಮಂದಿರದಲ್ಲಿ ಬಿಜೆಪಿ ವತಿಯಿಂದ ತಾಲ್ಲೂಕು ಪಂಚಾಯಿತಿ ನೂತನ ಸದಸ್ಯರಿಗೆ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದರು. ಕೆ.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ ಎಂಬ ಕೊರಗು ಕಾರ್ಯಕರ್ತರಿಗೆ ಬೇಡ. ಕಾರ್ಯ ಕರ್ತರೇ ಮುಂದೆ ನಿಂತು ಸಾರ್ವ ಜನಿಕರ ಕುಂದು ಕೊರತೆಗಳನ್ನು ಕೇಳ ಬೇಕು.ಅಲ್ಲದೆ ಸರ್ಕಾರಿ ಕಚೇರಿಗಳಿಗೆ ತೆರಳಿ ಸಾರ್ವಜನಿಕರ ಕೆಲಸ ಮಾಡಿಸಿ ಕೊಡಬೇಕು.ಇಂತಹ ಸಂದರ್ಭದಲ್ಲಿ ಸಾರ್ವ ಜನಿಕರ ಕೆಲಸ ಗಳನ್ನು ಮಾಡಲು ಮುಂದಾಗದ ಅಧಿಕಾರಿಗಳ ವಿರುದ್ಧ ದೂರು ಬಂದರೆ ಅಂತಹವರನ್ನು ತಕ್ಷಣವೇ ಎತ್ತಂಗಡಿ ಮಾಡ ಲಾಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಮ್ಮೆ ತಾಲ್ಲೂಕಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಶೀಲನೆ ಮಾಡು ವುದಾಗಿ ಹೇಳಿದ ಅವರು, ಅಭಿವೃದ್ಧಿ ದೃಷ್ಟಿಯಿಂದ ಚುನಾ ಯಿತಪ್ರತಿ ನಿಧಿಗಳು ಪಕ್ಷಾತೀತವಾಗಿ ಸಹಕಾರ ನೀಡಬೇಕು ಎಂದರು.ಬಿಜೆಪಿ ಮುಖಂಡ ದೊಡ್ಡಸ್ವಾಮೇ ಗೌಡ ಮಾತನಾಡಿ, ಈಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಪಕ್ಷದ ಪರವಾಗಿ 22 ಸಾವಿರ ಮತಗಳು ಬಂದಿದ್ದು, ತಾಲ್ಲೂಕು ಪಂಚಾಯಿತಿಯಲ್ಲಿ ಮೂವರು ಸದಸ್ಯರು ಆಯ್ಕೆಯಾಗಿ ್ದದಾರೆ.ಇದರಿಂದ ನಮ್ಮ ಮುನ್ನಡೆ ಆಶಾದಾಯಕವಾಗಿದೆ. ಪಕ್ಷವನ್ನು ಸ್ಥಳೀಯ ಮಟ್ಟದಿಂದ ಸಂಘಟಿಸುವು ದಾಗಿ ಹೇಳಿದರು. ಇದೇ ಸಂದರ್ಭ ದಲ್ಲಿ ತಾಲ್ಲೂಕು ಪಂಚಾ ಯಿತಿ ನೂತನ ಸದಸ್ಯರಾದ ಕೆ.ಜೆ.ರಮ್ಯ ಸತೀಶ್, ಎಚ್.ಡಿ.ಚಿಕ್ಕೇಗೌಡ, ಎಲ್.ಎಂ. ಸಣ್ಣಪ್ಪ ಅವರನ್ನು ಅಭಿನಂದಿಸ ಲಾಯಿತು.ವಿಧಾನ ಪರಿಷತ್ ಸದಸ್ಯರಾದ ತೋಂಟದಾರ್ಯ, ಸಿದ್ದರಾಜು, ಜಿ.ಪಂ.ಮಾಜಿ ಸದಸ್ಯ ಡಿ.ರವಿಶಂಕರ್, ಪಕ್ಷದ ತಾಲ್ಲೂಕು ಅಧ್ಯಕ್ಷ ಕೆ.ಸಿ. ಶಿವಕುಮಾರ್, ಪುರಸಭೆ ಸದಸ್ಯ ಎನ್.ರವಿ, ಮುಖಂಡರಾದ ಹೆಬ್ಬಾಳು ಗೋಪಾಲ್, ಹೆಬ್ಬಾಳು ನಾಗೇಂದ್ರ, ಪ್ರಭಾಕರ್ ಜೈನ್ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry