ಕರ್ತವ್ಯ ವಾಕಥಾನ್

7

ಕರ್ತವ್ಯ ವಾಕಥಾನ್

Published:
Updated:

ಫೋಡರ್ ಜಂಭೋ ಕಿಡ್ಸ್ ಹಾಗೂ ಹ್ಯಾಪಿ ಕಿಡ್ಸ್ ಸಂಯುಕ್ತವಾಗಿ ಏರ್ಪಡಿಸಿರುವ `ಕರ್ತವ್ಯ 2012- ವಾಕಥಾನ್~ ಭಾನುವಾರ  ನಡೆಯಲಿದೆ.ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮ ಕುರಿತು ಮಕ್ಕಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ವಾಕಥಾನ್ ಆಯೋಜಿಸಲಾಗಿದೆ.ವಾಕಥಾನ್ ಜತೆಗೆ ಮಕ್ಕಳಿಗೆ ಅಪಘಾತಗಳನ್ನು ತಡೆಗಟ್ಟುವ ಬಗೆ ಹೇಗೆ? ವಯಸ್ಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಹೇಗೆ ತಿಳಿವಳಿಕೆ ಮೂಡಿಸಬೇಕು ಎಂಬ ಬಗ್ಗೆ ಕೂಡ ತಿಳಿಸಿಕೊಡಲಾಗುತ್ತದೆ. ಮಕ್ಕಳಲ್ಲಿ ಶೈಕ್ಷಣಿಕ ಜ್ಞಾನದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೌಶಲ್ಯ ಬೆಳೆಸುವುದು ಈ ವಾಕಥಾನ್ ಹಿಂದಿರುವ ಉದ್ದೇಶ.ಕಬ್ಬನ್ ಪಾರ್ಕ್‌ನಲ್ಲಿರುವ ಬಾಲಭವನದ ಬಳಿ ವಾಕಥಾನ್‌ಗೆ ಚಾಲನೆ ನೀಡಲಾಗುವುದು. ನಟಿ ಸಂಜನಾ, ರಾಧಿಕಾ ಪಂಡಿತ್ ಹಾಗೂ  ಸಂಚಾರ ಪೊಲೀಸರು ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry