ಕರ್ನಾಟಕಕ್ಕೆ ಎರಡನೇ ಗೆಲುವು

7

ಕರ್ನಾಟಕಕ್ಕೆ ಎರಡನೇ ಗೆಲುವು

Published:
Updated:
ಕರ್ನಾಟಕಕ್ಕೆ ಎರಡನೇ ಗೆಲುವು

ಬೆಂಗಳೂರು: ಆತಿಥೇಯ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ 9ನೇ ಅಖಿಲ ಭಾರತ ಬಿ.ಎಸ್. ಎನ್.ಎಲ್. ಹಾಕಿ ಟೂರ್ನಿ ‘ಬಿ’ ಗುಂಪಿನ ಲೀಗ್‌ನಲ್ಲಿ ಎರಡನೇ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳ ವಾರ ನಡೆದ ಪಂದ್ಯದಲ್ಲಿ ಕರ್ನಾಟಕ 8-0 ಗೋಲುಗಳಿಂದ ಗುಜರಾತ್ ವಿರುದ್ಧ ಭರ್ಜರಿ ಗೆಲುವು ಪಡೆಯಿತು.ಏಕಪಕ್ಷೀವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಪಾರ್ಥಿಬನ್ (3), ಪ್ರಫುಲ್ ಕುಜೂರ್, ಮಹಮದ್ ನಜೀಮ್ ಬೆಪಾರಿ, ಎಚ್.ಸಿ. ಅಶೋಕ್, ಫೆಲಿಕ್ಸ್ ಅಲ್ವಿನ್, ವಿನೋದ್ ಚೆಂಗಪ್ಪ ಗೋಲು ತಂದಿತ್ತರು.‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ತಮಿಳುನಾಡು ತಂಡದವರು 2-0 ಗೋಲುಗಳಿಂದ ಪಶ್ಚಿಮಬಂಗಾಳ ವಿರುದ್ಧ ಅರ್ಹ ಜಯ ಸಾಧಿಸಿತು. ಎರಡು ಗೋಲುಗಳಿಸಿದ ಕೆ. ರಮೇಶ್ ಗೆಲುವಿನ ರೂವಾರಿ ಆದರು. ‘ಸಿ’ ಗುಂಪಿನ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡ 4-1 ಗೋಲುಗಳಿಂದ ಉತ್ತರಪ್ರದೇಶದ ಮೆಲೆ ಜಯ ಪಡೆಯಿತು. ವಿಜಯಿ ತಂಡದ ಎಂ.ಎಂ. ಕ್ವಾದ್ರಿ (2), ಬಿ.ಎಸ್. ಮೋಸಸ್, ಆರ್. ಶ್ರೀನಿವಾಸ್ ಹಾಗೂ ಎದುರಾಳಿ ತಂಡದ ಫಯಾಜ್ ಅಲಿ ಚೆಂಡನ್ನು ಗುರಿಮುಟ್ಟಿಸಿದರು.‘ಡಿ’ ಗುಂಪಿನಲ್ಲಿ ದೆಹಲಿ ಎನ್‌ಟಿ. ಆರ್. ತಂಡ 2-1 ಗೋಲುಗಳಿಂದ ಪಂಜಾಬ್ ತಂಡವನ್ನು ಮಣಿಸಿತು. ವಿಜಯಿ ತಂಡದ ಪ್ರೇಮ್‌ಜಿತ್ ಕುಜೂರ್, ಪಿ.ಎಸ್. ಬಿಸ್ತ್ ಹಾಗೂ ಎದುರಾಳಿ ತಂಡದ ಕುಲ್ವೀಂದರ್ ಮಂಗತ್ ಗೋಲುಗಳಿಸಿದರು. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಮಧ್ಯಪ್ರದೇಶ ತಂಡ 3-1 ಗೋಲುಗಳಿಂದ ದೆಹಲಿ ಎಂ.ಟಿ. ಎನ್.ಎಲ್. ಮೇಲೆ ಗೆದ್ದಿತು.ವಿಜಯಿ ತಂಡದ ಅಬ್ದುಲ್ ಹನೀಫ್, ಎಸ್. ಎಲ್. ಮಹೋಲೆ, ಇಫ್ತೇಕಾರ್ ಅಹಮದ್ ಹಾಗೂ ದೆಹಲಿ ತಂಡದ ಆರ್.ಎಸ್. ರಾವ ತ್ ಚೆಂಡನ್ನು ಯಶಪಡಿಸಿಕೊಂಡರು.

ಸ್ನೂಕರ್: ಚಾವ್ಲಾಗೆ ಜಯ

ಬೆಂಗಳೂರು: ಭಾರತದ ಕಮಲ್ ಚಾವ್ಲಾ ಅವರು ಥಾಯ್ಲೆಂಡ್‌ನ ಚಂತೀಬುರಿಯಲ್ಲಿ ನಡೆಯುತ್ತಿರುವ ಮೊದಲ ಏಷ್ಯನ್ 6 ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.ಕಮಲ್ ಚಾವ್ಲಾ 45-00, 35-22, 40-8, 47-36, 47- 1ರಲ್ಲಿ ಆತಿಥೇಯ ಥಾಯ್ಲೆಂಡ್‌ನ ಅಮ್ಮರ್ ತಾಕಿ ಅವರನ್ನು ಮಣಿಸಿ ದರು. ಇನ್ನೊಂದು ಪಂದ್ಯದಲ್ಲಿ ಕಮಲ್ 34-00, 19-33, 36- 08, 20-31, 37-8, 59-1, 43-0ರಲ್ಲಿ ಬಾಂಗ್ಲಾದೇಶದ ರೇಜ್ ಪಲ್ಲೋವಾ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry