ಬುಧವಾರ, ಮೇ 12, 2021
24 °C

ಕರ್ನಾಟಕಕ್ಕೆ ಮತ್ತೊಂದು ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ `ಹಾಕಿ ಇಂಡಿಯಾ' ಆಶ್ರಯದ ಪುರುಷರ ರಾಷ್ಟ್ರೀಯ ಸೀನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಮೂರನೇ ಗೆಲುವು ಸಾಧಿಸಿದ್ದಾರೆ.ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕ 8-1 ಗೋಲುಗಳಿಂದ ಬಿಹಾರ ತಂಡವನ್ನು ಮಣಿಸಿತು.ಕರ್ನಾಟಕ ತಂಡದ ಎಸ್.ಕೆ.ಉತ್ತಪ್ಪ (10ನೇ ನಿಮಿಷ), ನಿಕಿನ್ ತಿಮ್ಮಯ್ಯ (21ನೇ ನಿ.), ಚಿಂಗಪ್ಪ (28ನೇ ಹಾಗೂ 30ನೇ ನಿ.), ಮುದ್ದಪ್ಪ (38ನೇ ನಿ.), ವಿಕ್ರಮ್‌ಕಾಂತ್ (43ನೇ ನಿ.), ಬಿದ್ದಪ್ಪ (51ನೇ ನಿ.) ಹಾಗೂ ಎಂ.ಜಿ.ಪೂಣಚ್ಚ (52ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಬಿಹಾರ ತಂಡದ ಪರ ಏಕೈಕ ಗೋಲನ್ನು 56ನೇ ನಿಮಿಷದಲ್ಲಿ ಸತ್ನಮ್ ಸಿಂಗ್ ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.