ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

7

ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

Published:
Updated:
ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ

ಚೆನ್ನೈ: ಕರ್ನಾಟಕದ ಈಜು ಸ್ಪರ್ಧಿಗಳು ಇಲ್ಲಿ ಕೊನೆಗೊಂಡ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಜಯಿಸುವ ಮೂಲಕ ತಮ್ಮ ಸಾಮರ್ಥ್ಯವೇನೆಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಕರ್ನಾಟಕ ಒಟ್ಟು 551 ಪಾಯಿಂಟ್ಸ್ ಕಲೆ ಹಾಕಿತು.ಬಾಲಕರ ಎರಡನೇ ಗುಂಪಿನಲ್ಲಿ ಒಟ್ಟು 28 ಪಾಯಿಂಟ್ಸ್ ಪಡೆದ ಕರ್ನಾಟಕದ ಎಸ್.ಪಿ. ಲಿಖಿತ್ ಅತ್ಯುತ್ತಮ ಈಜು ಪಟು ಪ್ರಶಸ್ತಿ ಪಡೆದರು. ಒಟ್ಟು 187 ಪಾಯಿಂಟ್ಸ್ ಗಳಿಸಿದ ಕರ್ನಾಟಕ ಬಾಲಕರ  ತಂಡ ಚಾಂಪಿಯನ್ ಆದರೆ, ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರ (136) ಪ್ರಥಮ ಸ್ಥಾನ ಪಡೆಯಿತು.ಕೊನೆಯ ದಿನವಾದ ಭಾನುವಾರ ಲಿಖಿತ್ 200ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ರಾಷ್ಟ್ರೀಯ ದಾಖಲೆ ಮಾಡಿದರು. ನಿಗದಿತ ಗುರಿಯನ್ನು ಅವರು 2:29.48ಸೆಕೆಂಡ್‌ಗಳಲ್ಲಿ ಮುಟ್ಟಿ ನಾಲ್ಕು ವರ್ಷಗಳ ಹಿಂದೆ ಆಕಾಶ್ ರೋಹಿತ್ (ಕಾಲ: 2:33.61ಸೆ.) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.4್ಡ100 ಮೀ. ಮೆಡ್ಲೆ ರಿಲೇಯಲ್ಲಿ ಪ್ರಣವ್ ಬಿ. ಅಖಿಲೇಶ್ ರಾಮ್, ರಕ್ಷಿತಾ ಯು. ಶೆಟ್ಟಿ ಹಾಗೂ ಅಜಯ್ ಎ. ಅವರನ್ನೊಳಗೊಂಡ ಕರ್ನಾಟಕದ ತಂಡ ಚಿನ್ನದ ಪದಕ ಗೆದ್ದುಕೊಂಡಿತು. 1500ಮೀ. ಫ್ರಿಸ್ಟೈಲ್‌ನಲ್ಲಿ ಕರ್ನಾಟಕದ ಮಹಮ್ಮದ್ ಯಾಕೂಬ್ ಸಲೀಮ್ (ಕಾಲ: 17:41.88ಸೆ.) ಚಿನ್ನ ಗೆದ್ದರು. 4್ಡ400 ಮೆಡ್ಲೆ ರಿಲೇಯಲ್ಲೂ ಕರ್ನಾಟಕ `ಚಿನ್ನ~ದ ಸಾಧನೆ ಮಾಡಿತು. ಆದಿತ್ಯ, ಲಿಖಿತ್, ಅವಿನಾಶ್ ಮತ್ತು ಯಾಕೂಬ್ ಸಲೀಮ್ ಈ ತಂಡದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry