ಗುರುವಾರ , ಆಗಸ್ಟ್ 22, 2019
22 °C

ಕರ್ನಾಟಕದಲ್ಲಿ ಮಾತ್ರ ಕ್ಷೀರಭಾಗ್ಯ: ದೇಶಪಾಂಡೆ

Published:
Updated:

ಹಳಿಯಾಳ: `ಮಹಿಳೆಯರಿಗೆ ಅಭಿವೃದ್ಧಿ ಹೊಂದಲು ಸಾಕಷ್ಟು ಅವಕಾಶಗಳಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕು' ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.ಭಾನುವಾರ ಸ್ಥಳೀಯ ಶ್ರೀಗಣೇಶ ಕಲ್ಯಾಣ ಮಂಟಪದಲ್ಲಿ ಮಹಿಳೆಯರ  ಮತ್ತು ಮಕ್ಕಳ ಸಾಗಣೆ ತಡೆ ಕುರಿತು ಜಿಲ್ಲಾ ಮಟ್ಟದ ಜಾಥಾ ಹಾಗೂ ಕಾರ್ಯಾಗಾರ ಹಾಗೂ ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಹಾಲು ತಯಾರಿಸುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾಡಿ ಮಾತನಾಡಿದರು.`ಕ್ಷೀರ ಭಾಗ್ಯ ಯೋಜನೆ  ಕರ್ನಾಟಕದಲ್ಲಿ ಮಾತ್ರ ಇದೆ. ಪ್ರತಿಯೊಬ್ಬ ಮಗುವು ಉತ್ತಮ ಆರೋಗ್ಯ ಹಾಗೂ ಶಿಕ್ಷಣದಿಂದ ಹೊಂದಿರಬೇಕು. ಆ ನಿಟ್ಟಿನಲ್ಲಿ ಪಾಲಕರು ಸಹ ಆಸಕ್ತಿ ವಹಿಸಬೇಕು. ಜಿಲ್ಲೆಯಲ್ಲಿ 1,75,500 ಮಕ್ಕಳು ಕ್ಷೀರ ಭಾಗ್ಯ ಯೋಜನೆಯಡಿ ಲಾಭ ಹೊಂದಲಿದ್ದಾರೆ' ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಪಾಟೀಲ ಮಾತನಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯಿಂದ ಬಂದ ವಿವಿಧ ಅಂಗನವಾಡಿ ಕಾರ್ಯಕರ್ತೆಯರಿಗೆ ಕ್ಷೀರಭಾಗ್ಯ ಯೋಜನೆಯ ಪ್ರಾತ್ಯಕ್ಷಿಕೆ ನೀಡಲಾಯಿತು.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ಕಿಶೋರಿಯರಿಂದ ಕರಾಟೆ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಸುಬ್ರಾಯ ಕಾಮತ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಿಕ್ಕಮಠ, ತಹಶೀಲ್ದಾರ್ ಶಾರದಾ ಕೋಲಕಾರ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ನಂದಾ ಕೋರ್ವೇಕರ, ರೇಣುಕಾ ತಾಂಬಿಟಕರ,  ತಾ.ಪಂ. ಅಧ್ಯಕ್ಷೆ ದೇವಕಿ ಮೇತ್ರಿ, ಎಂ.ಎಸ್.ಕುರುಬಗಟ್ಟಿ ಉಪಸ್ಥಿತರಿದ್ದರು.

Post Comments (+)