ಕರ್ನಾಟಕದಲ್ಲಿ ಶೇ 20 ನಿರುದ್ಯೋಗ ಪ್ರಮಾಣ

7

ಕರ್ನಾಟಕದಲ್ಲಿ ಶೇ 20 ನಿರುದ್ಯೋಗ ಪ್ರಮಾಣ

Published:
Updated:

ಚಂಡಿಗಢ್ (ಪಿಟಿಐ): ದೇಶದಲ್ಲಿರುವ ನಿರುದ್ಯೋಗ ಪ್ರಮಾಣ 4.7 ರಷ್ಟಿದೆ ಎಂದು ಅಂದಾಜಿಸಲಾಗಿದ್ದು, ಸಿಕ್ಕಿಂ ಮತ್ತು ಛತ್ತಿಸ್‌ಗಡ್ ಕ್ರಮವಾಗಿ ದೇಶದ ಅತಿ ಹೆಚ್ಚು ಹಾಗೂ ಅತಿಕಡಿಮೆ ನಿರುದ್ಯೋಗ ಪ್ರಮಾಣದ ಹೊಂದಿರುವ ರಾಜ್ಯಗಳಾಗಿವೆ. ಕರ್ನಾಟಕ ಕಡಿಮೆ ನಿರುದ್ಯೋಗ ಪ್ರಮಾಣ (ಶೇಕಡಾ 20 ರಷ್ಟು) ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಮಿಕ  ಇಲಾಖೆ ಇಲ್ಲಿ ಗುರುವಾರ  `2012-13ರ ವಾರ್ಷಿಕ ಉದ್ಯೋಗ ಮತ್ತು ನಿರುದ್ಯೋಗ ಸಮಿಕ್ಷೆ'ಯ ಇತ್ತೀಚಿನ ವರದಿ ಬಿಡುಗಡೆಗೊಳಿಸಿದ್ದು, ಸಿಕ್ಕಿಂ ದೇಶದಲ್ಲಿ ಅತಿಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯ ಎನಿಸಿದೆ.

15 ವರ್ಷಕ್ಕೂ ಮೇಲ್ಪಟ್ಟ ಪ್ರತಿ ಸಾವಿರ ಜನರಲ್ಲಿ ನಿರುದ್ಯೋಗ ಪ್ರಮಾಣ ಸಿಕ್ಕಿಂ ರಾಜ್ಯದಲ್ಲಿ ಅತಿಹೆಚ್ಚು 136 ಇದ್ದು, ಅರುಣಾಚಲ ಪ್ರದೇಶ (130) , ತ್ರಿಪುರಾ (126), ಗೋವಾ (107) ಹಾಗೂ ಕೇರಳ (104) ನಂತರದ ಸ್ಥಾನಗಳಲ್ಲಿವೆ ಎಂದು ಕಾರ್ಮಿಕ ಇಲಾಖೆ ಪ್ರಧಾನ ನಿರ್ದೇಶಕ ದಲ್ಜಿತ್ ಸಿಂಗ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.

ವರದಿ ಪ್ರಕಾರ ದೇಶದ ನಿರುದ್ಯೋಗ ಪ್ರಮಾಣ 4.7 ರಷ್ಟು ಅಂದಾಜಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ದೇಶದ ಉತ್ತರ ಭಾಗದಲ್ಲಿ ಅತಿಹೆಚ್ಚು ನಿರುದ್ಯೋಗ ಪ್ರಮಾಣ ದಾಖಲಾಗಿದ್ದು, ಜಮ್ಮು ಮತ್ತು ಕಾಶ್ಮೀರ್‌ದಲ್ಲಿ ಶೇಕಡಾ 88, ಹಿಮಾಚಲ ಪ್ರದೇಶದಲ್ಲಿ 63, ದೆಹಲಿಯಲ್ಲಿ 57, ಕೇಂದ್ರಾಡಳಿತ ಪ್ರದೇಶ ಚಂಡಿಗಢ್‌ದಲ್ಲಿ 56 ಮತ್ತು ಪಂಜಾಬ್ ಹಾಗೂ ಹರಿಯಾಣದಲ್ಲಿ ತಲಾ 48 ರಷ್ಟಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ದೇಶದಲ್ಲಿ ಅತಿ ಕಡಿಮೆ ನಿರುದ್ಯೋಗ ಪ್ರಮಾಣ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಛತ್ತಿಸ್‌ಗಡ್ (14) ಮೊದಲ ಸ್ಥಾನದಲ್ಲಿದ್ದರೇ ಕರ್ನಾಟಕ (20) ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ (22), ಆಂಧ್ರಪ್ರದೇಶ (25), ಹಾಗೂ ಗುಜರಾತ್ (27)  ರಾಜ್ಯಗಳು ನಂತರದ ಸ್ಥಾನದಲ್ಲಿವೆ ಎಂದೂ ಸಿಂಗ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry