ಸೋಮವಾರ, ಮಾರ್ಚ್ 8, 2021
24 °C
ಮುದ್ರಾ ಯೋಜನೆ: ₹ 9.6 ಸಾವಿರ ಕೋಟಿ ವಿತರಣೆ

ಕರ್ನಾಟಕದವರಿಗೇ ಹೆಚ್ಚು ಸಾಲ!

l ಕೆ. ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಕರ್ನಾಟಕದವರಿಗೇ ಹೆಚ್ಚು ಸಾಲ!

ಮೈಸೂರು: ಸ್ವಂತ ವ್ಯಾಪಾರ ಹಾಗೂ ಕಿರು ಉದ್ದಿಮೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ (ಪಿಎಂಎಂವೈ) ಹೆಚ್ಚು ಸಾಲ ಸೌಲಭ್ಯ ಪಡೆದವರ ಪಟ್ಟಿಯಲ್ಲಿ ಕರ್ನಾಟಕದವರೇ ಮೊದಲ ಸ್ಥಾನದಲ್ಲಿದ್ದಾರೆ.ರಾಜ್ಯದಲ್ಲಿ ಇದುವರೆಗೆ 25.5 ಲಕ್ಷ ಫಲಾನುಭವಿಗಳಿಗೆ ₹ 9.6 ಸಾವಿರ ಕೋಟಿ ಸಾಲ ವಿತರಿಸಲಾಗಿದೆ. ಶಿಶು ಯೋಜನೆಯಡಿ 23.3 ಲಕ್ಷ ಮಂದಿಗೆ ₹ 4.6 ಸಾವಿರ ಕೋಟಿ, ಕಿಶೋರ ಯೋಜನೆಯಡಿ 1.9 ಲಕ್ಷ ಫಲಾನುಭವಿಗಳಿಗೆ ₹ 3.3 ಸಾವಿರ ಕೋಟಿ ಹಾಗೂ ತರುಣ ಯೋಜನೆಯಡಿ 23.6 ಸಾವಿರ ಜನಕ್ಕೆ ₹ 1.6 ಸಾವಿರ ಕೋಟಿ ಸಾಲ ನೀಡಲಾಗಿದೆ.ವಾಣಿಜ್ಯ ಬ್ಯಾಂಕ್‌, ಗ್ರಾಮೀಣ ಬ್ಯಾಂಕ್‌ ಹಾಗೂ ಸಣ್ಣ ಹಣಕಾಸು ಸಂಸ್ಥೆಗಳ ಮೂಲಕ ಮುದ್ರಾ (ಕಿರು ಉದ್ಯಮಗಳ ಅಭಿವೃದ್ಧಿ ಮತ್ತು ಮರು ಹಣಕಾಸು ಸಂಸ್ಥೆ) ಯೋಜನೆಯಡಿ ಸಾಲ ವಿತರಿಸಲಾಗುತ್ತಿದೆ. ಶಿಶು ಯೋಜನೆಯಲ್ಲಿ ಆರಂಭಿಕವಾಗಿ ₹ 50 ಸಾವಿರವರೆಗೆ, ಕಿಶೋರ ಯೋಜನೆಯಲ್ಲಿ ₹ 50 ಸಾವಿರದಿಂದ ₹ 5 ಲಕ್ಷದವರೆಗೆ ಹಾಗೂ ತರುಣ ಯೋಜನೆಯಲ್ಲಿ ₹ 5 ಲಕ್ಷದಿಂದ ₹ 10 ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ.‘ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರ ಗಳಲ್ಲಿ ಶಿಬಿರ ಆಯೋಜಿಸುವ ಮೂಲಕ ಯೋಜನೆಯನ್ನು ಜನರಿಗೆ ತಲುಪಿ ಸುವಲ್ಲಿ ಬ್ಯಾಂಕ್‌ಗಳು ಯಶಸ್ಸು ಕಂಡಿವೆ. ಈ ಸೌಲಭ್ಯ ಪಡೆಯಲು ಹೆಚ್ಚು ಮಂದಿ ಆಸಕ್ತಿ ತೋರಿಸುತ್ತಿದ್ದಾರೆ. ಮೈಸೂರು ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಮುದ್ರಾ ಯೋಜ ನೆಯ ಮೈಸೂರು ವಲಯದ ನೋಡಲ್‌ ಅಧಿಕಾರಿ ಎಸ್‌. ಕಾರ್ತಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ಕೆನರಾ ಬ್ಯಾಂಕ್‌ ವತಿಯಿಂದ ರಾಜ್ಯದ ವಿವಿಧೆಡೆ ಹಲವು ಶಿಬಿರ ಆಯೋಜಿಸಲಾಗಿದೆ. ಇದರಿಂದ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿದೆ. ಸುಮಾರು 62 ಸಾವಿರ ಫಲಾನುಭವಿಗಳಿಗೆ ₹ 1,259 ಕೋಟಿ ಸಾಲ ವಿತರಿಸಲಾಗಿದೆ’ ಎಂದು ಕೆನರಾ ಬ್ಯಾಂಕ್‌ ಸಹಾಯಕ ಪ್ರಧಾನ ವ್ಯವಸ್ಥಾ ಪಕ ಪುಂಡರಿಕಾಕ್ಷ ಮಾಹಿತಿ ನೀಡಿದರು.ಜನವರಿ 8ರವರೆಗೆ ದೇಶದ ವಿವಿಧೆಡೆ 2.3 ಕೋಟಿ ಫಲಾನುಭವಿ ಗಳಿಗೆ ₹ 81 ಸಾವಿರ ಕೋಟಿ ಸಾಲ ಸೌಲಭ್ಯ ನೀಡಲಾಗಿದೆ. ಸಣ್ಣ ಮತ್ತು ಚಿಲ್ಲರೆ ವ್ಯಾಪಾರಿಗಳು, ಬೀದಿಬದಿ ವರ್ತ ಕರು, ಆಟೊ, ಟ್ಯಾಕ್ಸಿ ಖರೀದಿಸಲು, ಹಣ್ಣು ಮಾರಾಟ ಮಳಿಗೆ, ಬಟ್ಟೆ ಮಾರಾಟ ಅಂಗಡಿ ತೆರೆಯಲು ಹೆಚ್ಚಿನ ವರು ಸಾಲ ಪಡೆಯುತ್ತಿದ್ದಾರೆ. ಕೃಷಿ ಉದ್ದೇಶಕ್ಕೆ ಈ ಸಾಲ ನೀಡುತ್ತಿಲ್ಲ‘ಮೈಸೂರು ಜಿಲ್ಲೆಯಲ್ಲಿ ಕಳೆದ ವರ್ಷ 9 ಶಿಬಿರಗಳನ್ನು ಆಯೋಜಿಸಿ ಮಾಹಿತಿ ನೀಡಲಾಗಿದೆ. ತಾಲ್ಲೂಕುಮಟ್ಟದಲ್ಲಿ ಸಭೆ ನಡೆಸಿ ಯೋಜನೆಯ ಪ್ರಯೋಜನ ತಿಳಿಸಲಾಗಿದೆ. ಜಿಲ್ಲೆಯಲ್ಲಿ 6,584 ಫಲಾನುಭವಿಗಳಿಗೆ ₹ 170 ಕೋಟಿ ಸಾಲ ನೀಡಲಾಗಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಕೆ.ಎನ್‌. ಶಿವಲಿಂಗಯ್ಯ ತಿಳಿಸಿದರು.‘ಹಿಂದೆ ಭದ್ರತೆ ಇಲ್ಲದೆ ಸಾಲ ನೀಡುತ್ತಿರಲಿಲ್ಲ. ಈಗ ತರಕಾರಿ ಮಾರಾಟಗಾರರಿಗೂ ಸುಲಭವಾಗಿ ಸಾಲ ಲಭಿಸುತ್ತಿದ್ದು, ಯಾವುದೇ ಭದ್ರತೆ ಬೇಡ. ಜತೆಗೆ ಕಡಿಮೆ ಬಡ್ಡಿ. ನಮ್ಮ ಬ್ಯಾಂಕ್‌ ವತಿಯಿಂದ ₹500 ಕೋಟಿ ಸಾಲ ವಿತರಿಸಲಾಗಿದೆ’ ಎಂದು ವಿಜಯ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಹಾಗೂ ರಾಜ್ಯ ನೊಡಲ್‌ ಅಧಿಕಾರಿ ಗೋವಿಂದ ಡೋಂಗ್ರೆ  ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.