ಕರ್ನಾಟಕದ ಜಲ ವಿದ್ಯುತ್ ಯೋಜನೆ ಅನುಮತಿ ಬೇಡ: ಜಯಲಲಿತಾ

7

ಕರ್ನಾಟಕದ ಜಲ ವಿದ್ಯುತ್ ಯೋಜನೆ ಅನುಮತಿ ಬೇಡ: ಜಯಲಲಿತಾ

Published:
Updated:

ಚನ್ನೈ(ಐಎಎನ್‌ಎಸ್): ಕಾವೇರಿ ಕೊಳ್ಳ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಕೈಗೊಳ್ಳದಂತೆ ಕರ್ನಾಟಕಕ್ಕೆ ಬುದ್ಧಿವಾದ ಹೇಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಮಂಗಳವಾರ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.ಪರಿಸರ ಮತ್ತು ಅರಣ್ಯ ಸಚಿವಾಲಯದಿಂದಲೂ ಯೋಜನೆಗೆ ಯಾವುದೇ ಅನುಮತಿ ನೀಡದಿರುವಂತೆ ಸೂಚನೆ ನಿಡಬೇಕು ಎಂದು ಪ್ರಧಾನಿ ಅವರಿಗೆ ಕೋರಿದ್ದಾರೆ.ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಬರೆದಿರುವ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಜಯಲಲಿತಾ ಅವರು, `ಈ ವಿಚಾರವಾಗಿ ತಾವು ತಕ್ಷಣ ಮಧ್ಯೆ ಪ್ರವೇಶಿಸಿ; ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳನ್ನು ಕರ್ನಾಟಕ ತಮಿಳುನಾಡು ಸರ್ಕಾರದ ಒಪ್ಪಿಗೆ ಇಲ್ಲದೆ ಕೈಗೊಳ್ಳದಂತೆ ಸೂಚನೆ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry