ಬುಧವಾರ, ಮೇ 19, 2021
22 °C

ಕರ್ನಾಟಕದ ಬೋಪಣ್ಣಗೆ ಬೆಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟಿಯಾಲ (ಪಿಟಿಐ): ಕರ್ನಾಟಕದ ಜಿ.ಎನ್.ಬೋಪಣ್ಣ ಮಂಗಳವಾರ ಇಲ್ಲಿ ಕೊನೆಗೊಂಡ 16ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.ಕೂಟದ ನಾಲ್ಕನೇ ಹಾಗೂ ಕೊನೆಯ ದಿನ ಬೋಪಣ್ಣ ಈ ದೂರವನ್ನು 22.22 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಮೊದಲ ಸ್ಥಾನ ಏರ್ ಫೋರ್ಸ್‌ನ ನಿತಿನ್ ಕುಮಾರ್ (22.13 ಸೆ.) ಪಾಲಾಯಿತು.ಒಎನ್‌ಜಿಸಿ ತಂಡವನ್ನು ಪ್ರತಿನಿಧಿಸುತ್ತಿರುವ ಸಿದ್ಧಾಂತ್ ತಿಂಗಳಾಯ 110 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದರು. ಅವರು ಈ ದೂರವನ್ನು 13.69 ಸೆಕೆಂಡ್‌ಗಳಲ್ಲಿ ತಲುಪಿದರು.ಆದರೆ ಒಲಿಂಪಿಕ್ಸ್ ಅರ್ಹತಾ ಮಟ್ಟ (13.60 ಸೆ.) ಮುಟ್ಟಲು ಅವರಿಗೆ ಸಾಧ್ಯವಾಗಲಿಲ್ಲ. ತಮಿಳುನಾಡಿನ ಜೆ.ಸುರೇಂದರ್ ಹಾಗೂ ಟಿ.ಬಾಲಮುರುಗನ್ ನಂತರದ ಸ್ಥಾನ ಪಡೆದರು. 800 ಮೀ. ಓಟದಲ್ಲಿ ಕೇರಳದ ಸಜೀಶ್ ಜೋಸೆಫ್ ಚಿನ್ನ ಗೆದ್ದರು.ಮಹಿಳೆಯರ ವಿಭಾಗದ 100 ಮೀ.ಹರ್ಡಲ್ಸ್‌ನಲ್ಲಿ ಕೇರಳದ ಸಿ.ಟಿ.ರಾಜಿ (14.61 ಸೆ.) ಮೊದಲ ಸ್ಥಾನ ಗಳಿಸಿದರು. ಕರ್ನಾಟಕದ ಪಿ.ಎಂ.ಮಂಜು (15.03 ಸೆ.) ಕಂಚಿನ ಪದಕ ಜಯಿಸಿದರು. ಹರಿಯಾಣದ ಮನಿಷಾ (24.81 ಸೆ.) 200 ಮೀ.ನಲ್ಲಿ ಚಿನ್ನ ಗೆದ್ದರು. ಕೇರಳದ ಎಂ.ಎ.ಪ್ರಜೂಷಾ ಟ್ರಿಪಲ್ ಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದರು.ಗಮನಾರ್ಹ ಪ್ರದರ್ಶನ ತೋರಿದ ಒಎನ್‌ಜಿಸಿ ತಂಡದವರು (9 ಚಿನ್ನ, 6 ಬೆಳ್ಳಿ, 5 ಕಂಚು) ಸಮಗ್ರ ಚಾಂಪಿಯನ್ ಪಟ್ಟ ಗಳಿಸಿದರು. ಕೇರಳ (7 ಚಿನ್ನ, 7 ಬೆಳ್ಳಿ, 5 ಕಂಚು) ಎರಡನೇ ಸ್ಥಾನ ಪಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.