ಕರ್ನಾಟಕದ 14 ಮಂದಿ ಸೇರಿ 4,120 ಜನ ಕಾಣೆ

7
ಉತ್ತರಾಖಂಡ ದುರಂತ:

ಕರ್ನಾಟಕದ 14 ಮಂದಿ ಸೇರಿ 4,120 ಜನ ಕಾಣೆ

Published:
Updated:

ಡೆಹ್ರಾಡೂನ್ (ಪಿಟಿಐ): ಜೂನ್ ತಿಂಗಳ ಮಧ್ಯ ಭಾಗದಲ್ಲಿ ಉತ್ತರಾಖಂಡನಲ್ಲಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಭೂಕುಸಿತ ಘಟನೆಯ ಪರಿಣಾಮ ಕರ್ನಾಟಕದ 14 ಮಂದಿ ಸೇರಿದಂತೆ 4 ಸಾವಿರದ 120 ಮಂದಿ ಕಾಣೆಯಾಗಿದ್ದಾರೆ. ನೆರೆಯ ನೇಪಾಳ ರಾಷ್ಟ್ರದ ಜನರೂ ಇದರಲ್ಲಿ ಸೇರಿದ್ದಾರೆ.

ಉತ್ತರಾಖಂಡ ಸರ್ಕಾರ ಮಂಗಳವಾರ ಬಿಡುಗಡೆಗೊಳಿಸಿದ ದೃಢಿಕೃತ ಅಂತಿಮ ಪಟ್ಟಿಯ ಪ್ರಕಾರ, ದುರ್ಘಟನೆಯಲ್ಲಿ ಉತ್ತರ ಪ್ರದೇಶದ  ಜನರು (1,150) ಅತಿ ಹೆಚ್ಚು ಕಾಣೆಯಾಗಿದ್ದಾರೆ.

ಉತ್ತರಾಖಂಡದ 168, ಉತ್ತರ ಪ್ರದೇಶದ 96, ರಾಜಸ್ತಾನದ 34 ಹಾಗೂ ದೆಹಲಿಯ 32 ಮಕ್ಕಳು ಸೇರಿದಂತೆ ದುರಂತದಲ್ಲಿ ಒಟ್ಟು 421 ಮಕ್ಕಳು ಕಾಣೆಯಾಗಿದ್ದಾರೆ.

ವಿವಿಧ ರಾಜ್ಯಗಳ ಅಧಿಕಾರಿಗಳನ್ನು  ಹಾಗೂ ರಾಜ್ಯದ 13 ಜಿಲ್ಲೆಗಳಲ್ಲಿ ನೇಪಾಳ ದಾಖಲಿಸಿರುವ ಪ್ರಕರಣಗಳು ಹಾಗೂ ಡೆಹ್ರಾಡೂನ್‌ನಲ್ಲಿರುವ ಉತ್ತರಾಖಂಡ ಕಾಣೆ ವ್ಯಕ್ತಿಗಳ ಘಟಕದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದೃಢಿಕೃತ ಪಟ್ಟಿ ತಯಾರಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಕಾಣೆಯಾದವರ ಸಂಖ್ಯೆಯಲ್ಲಿ ಉತ್ತರ ಪ್ರದೇಶ (1,150), ಉತ್ತರಾಖಂಡ (852) ಹಾಗೂ ಮಧ್ಯಪ್ರದೇಶ (542) ರಾಜ್ಯಗಳು ಮೊದಲು ಮೂರು ಸ್ಥಾನದಲ್ಲಿವೆ.

ಇನ್ನುಳಿದಂತೆ ರಾಜಸ್ತಾನ (511), ದೆಹಲಿ (216), ಮಹಾರಾಷ್ಟ್ರ (163), ಗುಜರಾತ್ (129), ಹರಿಯಾಣ (112), ನೇಪಾಳ (92), ಆಂಧ್ರ ಪ್ರದೇಶ (86), ಬಿಹಾರ್ (58), ಜಾರ್ಖಂಡ್ (40), ಪಶ್ಚಿಮ ಬಂಗಾಳ (36), ಚತ್ತಿಸ್‌ಗಢ್ (29), ಒಡಿಶಾ (26), ತಮಿಳನಾಡು (14), ಕರ್ನಾಟಕ (14), ಮೇಘಾಲಯ (6), ಚಂಡಿಗಢ (4), ಜಮ್ಮು ಮತ್ತು ಕಾಶ್ಮೀರ (3), ಕೇರಳ (2), ಪುದುಚೇರಿ (1) ಮತ್ತು ಅಸ್ಸಾಂ (1) ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಕಾಣೆಯಾಗಿರುವ ಬಹುತೇಕ ನೇಪಾಳಿಗರು ಕಾರ್ಮಿಕರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry