ಕರ್ನಾಟಕ ಎ ತಂಡ ಶುಭಾರಂಭ

ಭಾನುವಾರ, ಜೂಲೈ 21, 2019
25 °C

ಕರ್ನಾಟಕ ಎ ತಂಡ ಶುಭಾರಂಭ

Published:
Updated:

ತುಮಕೂರು: ಕರ್ನಾಟಕ `ಎ~ ತಂಡದವರು ಜಿಲ್ಲಾ ಪೃಥ್ವಿ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ ದಕ್ಷಿಣ ವಲಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಲೀಗ್ ಪಂದ್ಯದಲ್ಲಿ ಶುಭಾರಂಭ ಮಾಡಿದರು.ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ  ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರಭಾವಿ ಆಟವಾಡಿದ ಕರ್ನಾಟಕ `ಎ~ ತಂಡ 29-14, 29-12 ಪಾಯಿಂಟ್‌ಗಳಿಂದ ಹೈದರಾಬಾದ್ ತಂಡದ ಎದುರು ಸುಲಭ ಗೆಲುವು ಪಡೆಯಿತು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಆಂಧ್ರ ತಂಡವು 29-10, 29-20ಪಾಯಿಂಟ್‌ಗಳಲ್ಲಿ ಕರ್ನಾಟಕ `ಬಿ~ ತಂಡದ ವಿರುದ್ಧವೂ, ಕೇರಳ 29-13, 29-13ರಲ್ಲಿ ಕರ್ನಾಟಕ ಬಿ ತಂಡದ ಮೇಲೂ, ತಮಿಳುನಾಡು ತಂಡ 29-10, 29-13 ರಲ್ಲಿ ಪಾಂಡಿಚೇರಿ ವಿರುದ್ಧವೂ ಹಾಗೂ ಕೇರಳ ತಂಡ 29-8, 29-15ರಲ್ಲಿ ಆಂಧ್ರಪ್ರದೇಶದ ಮೇಲೂ ಗೆಲುವು ಪಡೆಯಿತು.ಮಹಿಳೆಯರ ವಿಭಾಗದಲ್ಲಿ ಆಂಧ್ರಪ್ರದೇಶ ತಂಡ 29-01, 29-03 ಪಾಯಿಂಟ್‌ಗಳಲ್ಲಿ ಪಾಂಡಿಚೇರಿ ತಂಡದ ವಿರುದ್ಧವೂ, ಕೇರಳ ತಂಡ 29-8, 29-12ರಲ್ಲಿ ಹೈದರಬಾದ್ ತಂಡದ ಮೇಲೂ, ಕರ್ನಾಟಕ `ಎ~ ತಂಡವು 29-1, 29-00ರಲ್ಲಿ ಪಾಂಡಿಚೇರಿ ವಿರುದ್ಧವೂ ಗೆಲುವು ಪಡೆದು ಮುಂದಿನ ಸುತ್ತಿಗೆ ಮುನ್ನಡೆಯಿತು.ಮಿಶ್ರ ಡಬಲ್ಸ್ ಚಾಂಪಿಯನ್‌ಷಿಪ್, ಕರ್ನಾಟಕಕ್ಕೆ ಗೆಲುವು: ಕರ್ನಾಟಕ `ಬಿ~ ತಂಡದವರು 29-20, 29-26 ಪಾಯಿಂಟ್‌ಗಳಿಂದ ಆಂಧ್ರಪ್ರದೇಶದ ವಿರುದ್ಧ 12 ವರ್ಷ ವಯೋಮಿತಿ ಒಳಗಿನ  ಕಿರಿಯರ ಮಿಶ್ರ ಡಬಲ್ಸ್ ಚಾಂಪಿಯನ್‌ಶಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.ಇನ್ನೊಂದು ಪಂದ್ಯದಲ್ಲಿ ಹೈದರಾಬಾದ್ ತಂಡವು  29-12, 29-11ರಲ್ಲಿ ಕರ್ನಾಟಕದ ಎದುರು ಗೆಲುವು ಸಾಧಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry