ಸೋಮವಾರ, ಅಕ್ಟೋಬರ್ 21, 2019
26 °C

ಕರ್ನಾಟಕ ಚಾಂಪಿಯನ್

Published:
Updated:

ಬೆಂಗಳೂರು: ಕರ್ನಾಟಕ ಪುರುಷರ ತಂಡದವರು ಹೈದರಾಬಾದ್‌ನಲ್ಲಿ ನಡೆದ 57ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರು `ರನ್ನರ್ ಅಪ್~ ಸ್ಥಾನ ಪಡೆದರು.

ಶುಕ್ರವಾರ ನಡೆದ ಫೈನಲ್‌ನಲ್ಲಿ ಪುರುಷರ ತಂಡ 29-25, 29-9 ರಲ್ಲಿ ಹೈದರಾಬಾದ್ ವಿರುದ್ಧ ಜಯ ಸಾಧಿಸಿತು. ಮಹಿಳೆಯರ ವಿಭಾಗದಲ್ಲಿ ತಮಿಳುನಾಡು 29-13, 29-18 ರಲ್ಲಿ ಕರ್ನಾಟಕ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು.

ಕರ್ನಾಟಕ ಪುರುಷರ ತಂಡದ ವೆಂಕಟ್ ರಾಮ್ ಮತ್ತು ದಿವಾಕರ್ `ಸ್ಟಾರ್ ಆಫ್ ಇಂಡಿಯಾ~ ಗೌರವ ಪಡೆದರೆ, ಕಿರಣ್ ಕುಮಾರ್ `ಅತ್ಯುತ್ತಮ ಆಟಗಾರ~ ಎನಿಸಿಕೊಂಡರು. ಮಹಿಳೆಯರ ವಿಭಾಗದಲ್ಲಿ ಸವಿತಾ `ಸ್ಟಾರ್ ಆಫ್ ಇಂಡಿಯಾ~ ಗೌರವ ಪಡೆದರು.

Post Comments (+)