ಶನಿವಾರ, ಆಗಸ್ಟ್ 17, 2019
27 °C

`ಕರ್ನಾಟಕ, ಜಾರ್ಖಂಡ್ ಉಕ್ಕು ಘಟಕ ಪ್ರಗತಿ ಮಂದಗತಿ'

Published:
Updated:

ನವದೆಹಲಿ(ಪಿಟಿಐ): ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿನ ಉದ್ದೇಶಿತ 1800 ಕೋಟಿ ಡಾಲರ್(ರೂ108000 ಕೋಟಿ) ಹೂಡಿಕೆಯ ಉಕ್ಕು ಘಟಕ ಆರಂಭ ಪ್ರಕ್ರಿಯೆ ಸಮಾಧಾನಕರವಾಗಿಯೇನೂ ಇಲ್ಲ ಎಂದು `ಆರ್ಸೆಲರ್ ಮಿತ್ತಲ್' ಕಂಪೆನಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಹೇಳಿದರು.ಇಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತಿದ್ದ ಅವರು, ಎರಡೂ ರಾಜ್ಯಗಳಲ್ಲಿ ಉಕ್ಕು ಘಟಕ ಸ್ಥಾಪನೆಗೆ ಸಂಬಂಧಿಸಿ ಭೂಸ್ವಾಧೀನ, ಸರ್ಕಾರದ ಸ್ಪಂದನೆ ಮೊದಲಾದ ಅಂಶಗಳನ್ನು ಗಮನಿಸುತ್ತಿದ್ದೇವೆ.

ಮುಂದೆ ಏನಾಗಲಿದೆ ಎಂಬುದನ್ನು ನೋಡಿಕೊಂಡು ಹೆಜ್ಜೆ ಇಡುತ್ತೇವೆ ಎಂದು ಹೇಳಿದರು. ಈಗಾಗಲೇ ಒಡಿಶಾ ಯೋಜನೆಯನ್ನು ಆರ್ಸೆಲರ್ ಮಿತ್ತಲ್ ಕಂಪೆನಿ ಕೈಬಿಟ್ಟಿದೆ.

Post Comments (+)