ಕರ್ನಾಟಕ ತಂಡಕ್ಕೆ ಚಿನ್ನ

7
ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್

ಕರ್ನಾಟಕ ತಂಡಕ್ಕೆ ಚಿನ್ನ

Published:
Updated:

ಬೆಂಗಳೂರು: ಕರ್ನಾಟಕದ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ ಕೆನರಾ ಬ್ಯಾಂಕ್ ರಾಷ್ಟ್ರೀಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ `ಮಿಶ್ರ ಟ್ರಯೊಸ್' ವಿಭಾಗದಲ್ಲಿ ಬಂಗಾರ ಜಯಿಸಿದರು.ಒರಾಯನ್ ಮಾಲ್‌ನ `ಬ್ಲೂ ಒ' ಬೌಲಿಂಗ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಪ್ರತಿಮಾ ಹೆಗ್ಡೆ, ಹುನೇದ್ ಖೋಕರ್ ಮತ್ತು ಗಿರೀಶ್ ಗಾಬಾ ಅವರನ್ನೊಳಗೊಂಡ ಕರ್ನಾಟಕ ಒಟ್ಟು 3,521 ಪಾಯಿಂಟ್‌ಗಳ ಮೂಲಕ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.ದೆಹಲಿಯ ಎನ್‌ಪಿ ಸಿಂಗ್, ಸರಬ್ಜಿತ್ ಸಿಂಗ್ ಮತ್ತು ಸುಗಂಧಾ ಸರ್ದಾ (3465) ಎರಡನೇ ಸ್ಥಾನ ಪಡೆದು ಬೆಳ್ಳಿ ಜಯಿಸಿದರು. ಆಂಧ್ರ ಪ್ರದೇಶದ ಸುಮತಿ ಎನ್., ವಿವೇಕ್ ಸಿಂಗ್ ಮತ್ತು ಪ್ರಣೀತ್ ಗೌಡ (3390) ಮೂರನೇ ಸ್ಥಾನ ಪಡೆದರು.ಪುರುಷರ `ಆಲ್ ಈವೆಂಟ್ಸ್' ಸ್ಪರ್ಧೆಯ 18 ಗೇಮ್‌ಗಳ ಬಳಿಕ ದೆಹಲಿಯ ಧ್ರುವ್ ಸರ್ದಾ 3726 ಪಾಯಿಂಟ್‌ಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. ತಮಿಳುನಾಡಿನ ಶಬ್ಬೀರ್ ಧನ್ಕೋಟ್ (3583) ಹಾಗೂ ಎನ್‌ಪಿ ಸಿಂಗ್ (3536) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry