ಸೋಮವಾರ, ಜನವರಿ 20, 2020
20 °C

ಕರ್ನಾಟಕ ತಂಡಕ್ಕೆ ಮತ್ತೊಂದು ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಕರ್ನಾಟಕ ತಂಡ ಇಲ್ಲಿ ನಡೆಯುತ್ತಿರುವ ಪಿ.ಎಸ್. ರಾಮ ಮೋಹನ್ ಟ್ರೋಫಿ ದಕ್ಷಿಣ ವಲಯ 25 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ.ಭಾನುವಾರ ನಡೆದ ಪಂದ್ಯದಲ್ಲಿ ಕರ್ನಾಟಕ ಎರಡು ವಿಕೆಟ್‌ಗಳಿಂದ ತಮಿಳುನಾಡು ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ರಾಜ್ಯ ತಂಡ ಒಟ್ಟು 14 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಕೇರಳ (8) ಮತ್ತು ಹೈದರಾಬಾದ್ (7) ಬಳಿಕದ ಸ್ಥಾನಗಳಲ್ಲಿವೆ.ಮೊದಲು ಬ್ಯಾಟ್ ಮಾಡಿದ ತಮಿಳುನಾಡು 49.4 ಓವರ್‌ಗಳಲ್ಲಿ 311 ರನ್ ಗಳಿಸಿತು. ಕರ್ನಾಟಕ 48.5 ಓವರ್‌ಗಳಲ್ಲಿ 8 ವಿಕೆಟ್‌ಗೆ 312 ರನ್ ಗಳಿಸಿ ಜಯ ಪಡೆಯಿತು. ಅನಿರುದ್ಧ್ ಜೋಶಿ 95 (78 ಎಸೆತ, 5 ಬೌಂ, 3 ಸಿಕ್ಸರ್) ಹಾಗೂ ಮಯಾಂಕ್ ಅಗರ್‌ವಾಲ್ 58 (42 ಎಸೆತ, 10 ಬೌಂ) ಆಕರ್ಷಕ ಅರ್ಧಶತಕ ಗಳಿಸಿ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಸಂಕ್ಷಿಪ್ತ ಸ್ಕೋರ್: ತಮಿಳುನಾಡು: 49.4 ಓವರ್‌ಗಳಲ್ಲಿ 311 (ಆರ್. ರೋಹಿತ್ 108, ವಿಜಯ್ ಶಂಕರ್ 126, ರೋನಿತ್ ಮೋರೆ 53ಕ್ಕೆ 3, ಕೆ. ಗೌತಮ್ 53ಕ್ಕೆ 2). ಕರ್ನಾಟಕ: 48.5 ಓವರ್‌ಗಳಲ್ಲಿ 8 ವಿಕೆಟ್‌ಗೆ 312 (ಮಯಾಂಕ್ ಅಗರ್‌ವಾಲ್ 58, ಕರುಣ್ ನಾಯರ್ 29, ಕೆ.ಸಿ. ಅವಿನಾಶ್ 41, ಅನಿರುದ್ಧ್ ಜೋಶಿ 95, ಮಾರ್ಟಿನ್ ಸಂಜೀವ್ 53ಕ್ಕೆ 4).

 

ಪ್ರತಿಕ್ರಿಯಿಸಿ (+)