ಬುಧವಾರ, ಜನವರಿ 22, 2020
16 °C
ದಕ್ಷಿಣ ವಲಯ ಕ್ರಿಕೆಟ್‌

ಕರ್ನಾಟಕ ತಂಡ ಪರಾಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಆತಿಥೇಯ ತಮಿಳುನಾಡು ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಮುಟ್ಟಲು ಪರದಾಡಿದ ಕರ್ನಾಟಕ  ಇಲ್ಲಿ ನಡೆದ 16 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯ ಐದನೇ ಸುತ್ತಿನ ಪಂದ್ಯದಲ್ಲಿ ಇನಿಂಗ್ಸ್‌್ ಮತ್ತು 113 ರನ್‌ಗಳಿಂದ ಸೋಲು ಕಂಡಿತು.ತಮಿಳುನಾಡು ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 356 ರನ್‌ ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಕರ್ನಾಟಕ ಪ್ರಥಮ ಇನಿಂಗ್ಸ್‌ನಲ್ಲಿ 117 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 126 ರನ್‌ಗಳನ್ನಷ್ಟೇ ಕಲೆ ಹಾಕಿತು. 13 ವಿಕೆಟ್‌ ಉರುಳಿಸಿದ ಸ್ಪಿನ್ನರ್‌ ಎಂ. ಸಿದ್ದಾರ್ಥ್‌ ತಮಿಳುನಾಡು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರಲ್ಲದೇ, ವಿಜಯ್‌ ಮರ್ಚಂಟ್‌ ಟ್ರೋಫಿ ಟೂರ್ನಿಗೆ ಅರ್ಹತೆ ಗಿಟ್ಟಿಸಲು ಕಾರಣರಾದರು.ಕೇರಳ ಮತ್ತು ಆಂಧ್ರಪ್ರದೇಶ ತಂಡಗಳ ನಡುವಿನ ಪಂದ್ಯ ಡ್ರಾ ಆಯಿತು. ಇನಿಂಗ್ಸ್‌್ ಮುನ್ನಡೆ ಗಳಿಸಿದ ಕೇರಳ ವಿಜಯ್‌ ಮರ್ಚಂಟ್‌ ಟ್ರೋಫಿಗೆ ಅರ್ಹತೆ ಪಡೆಯಿತು.

ಪ್ರತಿಕ್ರಿಯಿಸಿ (+)