ಕರ್ನಾಟಕ ಭ್ರಷ್ಟತೆಯಲ್ಲಿ ದೇಶದಲ್ಲೆ ನಂ.1- ರಾಹುಲ್ ಗಾಂಧಿ

7

ಕರ್ನಾಟಕ ಭ್ರಷ್ಟತೆಯಲ್ಲಿ ದೇಶದಲ್ಲೆ ನಂ.1- ರಾಹುಲ್ ಗಾಂಧಿ

Published:
Updated:
ಕರ್ನಾಟಕ ಭ್ರಷ್ಟತೆಯಲ್ಲಿ ದೇಶದಲ್ಲೆ ನಂ.1- ರಾಹುಲ್ ಗಾಂಧಿ

ವಿಜಾಪುರ (ಐಎಎನ್ಎಸ್): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದು, ದೇಶದಲ್ಲೇ ಕರ್ನಾಟಕವು ಅತ್ಯಂತ ಭ್ರಷ್ಟ ರಾಜ್ಯ ಎಂಬ ಹೆಸರು ಗಳಿಸಿದೆ. ಇದರಿಂದ ರಾಜ್ಯದ ಸಾಮಾನ್ಯ ಜನತೆ ಪರಿತಪಿಸುತ್ತಿದ್ದಾರೆ. ಇದನ್ನು ತೊಡೆದು ಹಾಕಲು ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದೆ ಬರಬೇಕು ಎಂದು ಹೇಳಿದರು.ಕರ್ನಾಟಕವು ಐಟಿ ರಂಗದಲ್ಲಿ ದೇಶದಲ್ಲೇ ಮುಂದೆ ಇದೆ. ಬೆಂಗಳೂರು ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೆಲ್ಲಾ ಅದದ್ದು ಕಾಂಗ್ರೆಸ್ ಪಕ್ಷದ ಆಡಳಿತದ ಕಾಲದಲ್ಲಿ ಎಂದು ಅವರು ತಿಳಿಸಿದರು.ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಅವರು ಮೊದಲಿಗೆ ಹುಬ್ಬಳ್ಳಿಗೆ ಆಗಮಿಸಿ ನಂತರ ವಿಜಾಪುರದಲ್ಲಿ ನೆರದಿದ್ದ ಅಪಾರ ಸಂಖ್ಯೆಯ ಯುವಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.ಇವರೊಂದಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry