ಕರ್ನಾಟಕ ವಿವಿ ರಾಣಿ ಚನ್ನಮ್ಮ ಕ್ರೀಡಾಂಗಣ ನೂತನ ಪೆವಿಲಿಯನ್ ನಿರ್ಮಾಣ

7

ಕರ್ನಾಟಕ ವಿವಿ ರಾಣಿ ಚನ್ನಮ್ಮ ಕ್ರೀಡಾಂಗಣ ನೂತನ ಪೆವಿಲಿಯನ್ ನಿರ್ಮಾಣ

Published:
Updated:
ಕರ್ನಾಟಕ ವಿವಿ ರಾಣಿ ಚನ್ನಮ್ಮ ಕ್ರೀಡಾಂಗಣ ನೂತನ ಪೆವಿಲಿಯನ್ ನಿರ್ಮಾಣ

ಧಾರವಾಡ: ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ನೂರಾರು ಅಥ್ಲೀಟ್‌ಗಳು ಬೆವರು ಹರಿಸಿದ ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಕ್ರೀಡಾಂಗಣ ಬಹಳ ವರ್ಷಗಳ ಬಳಿಕ ನವೀಕರಣಗೊಳ್ಳುತ್ತಿದೆ.ಮೈದಾನದ ಮುಂಭಾಗದಲ್ಲಿ ಈಚೆಗಷ್ಟೇ ಸುಸಜ್ಜಿತ ತಂತಿ ಬೇಲಿಯನ್ನು ಹಾಕಲಾಗಿದೆ. ವಿಶ್ವವಿದ್ಯಾಲಯದ 11ನೇ ಹಣಕಾಸು ಯೋಜನೆಯಲ್ಲಿ ಮೀಸಲಿಟ್ಟ 45 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಕೊಠಡಿಗಳ ಪೆವಿಲಿಯನ್ ನಿರ್ಮಿಸಲಾಗಿದ್ದು, ಒಂದರಲ್ಲಿ `ಮಲ್ಟಿಸ್ಟೇಷನ್ ಜಿಮ್' ಹಾಗೂ ಮತ್ತೊಂದರಲ್ಲಿ ಕ್ರೀಡಾಕೂಟಕ್ಕೆಂದು ಬರುವ ಅತಿಥಿಗಳು ಕುಳಿತುಕೊಳ್ಳಲು ಮೀಸಲಿಡಲಾಗಿದೆ.

ಕಳೆದ ಡಿ 12ರಂದು ನಡೆದ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಕ್ರೀಡಾಕೂಟದ ಸಂದರ್ಭದಲ್ಲಿ ಈ ಪೆವಿಲಿಯನ್ ಉದ್ಘಾಟನೆಯಾಯಿತು.

ರಿಪೇರಿಯಾಗಲಿ ಮೇಲ್ಛಾವಣಿ: 62 ವರ್ಷಗಳ ಹಿಂದೆ ನಿರ್ಮಾಣವಾದ ಈ ಕ್ರೀಡಾಂಗಣ ಇತ್ತೀಚಿನವರೆಗೂ ಹೇಳಿಕೊಳ್ಳುವಂತಹ ಅಭಿವೃದ್ಧಿಯನ್ನು ಕಂಡಿರಲಿಲ್ಲ. ಆದರೆ ವಿಶ್ವವಿದ್ಯಾಲ ಯದ ಆರ್ಥಿಕ ಸಂಪನ್ಮೂಲ ಹೆಚ್ಚುತ್ತಿದ್ದಂತೆಯೇ ಇದರ ಪುನರ್ ನವೀಕರಣ ಕಾಮಗಾರಿ ಯನ್ನು ಕೈಗೆತ್ತಿಕೊಳ್ಳಲಾಯಿತು.ಡಾ.ಡಿ.ಎಂ. ನಂಜುಂಡಪ್ಪ ಅವರು ಕುಲಪತಿಯಾಗಿದ್ದ (1981-84) ಅವಧಿಯಲ್ಲಿ ಕ್ರೀಡಾಂಗಣದ ಪ್ರೇಕ್ಷಕರು ಕುಳಿತುಕೊಳ್ಳುವ ಭಾಗದಲ್ಲಿ ಮೇಲ್ಛಾವಣೆಯನ್ನು ನಿರ್ಮಿಸಿದ್ದರು. ಆ ಬಳಿಕ ಕಳೆದ ಅವಧಿಗೆ ಕುಲಪತಿ ಯಾಗಿದ್ದ ಡಾ.ಎಸ್.ಕೆ.ಸೈದಾಪುರ ಅವರು ಮೈದಾನದ ಸುತ್ತಲೂ ತಂತಿ ಬೇಲಿ ನಿರ್ಮಿಸಲು ಹಣವನ್ನು ಮಂಜೂರು ಮಾಡಿದ್ದರು. ಇದೀಗ ವಾಲೀಕಾರ ಅವರು ಪೆವಿಲಿಯನ್ ನಿರ್ಮಿಸಲು ಅನುಮೋದನೆ ನೀಡ್ದ್ದಿದಾರೆ.`ಎಲ್ಲ ಬಗೆಯ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿ ಸುವ ಸಂದರ್ಭದಲ್ಲಿ ಬಳಕೆ ಮಾಡಲು 30್ಡ40 ಗಾತ್ರದ ವೇದಿಕೆಯನ್ನೂ ನಿರ್ಮಿಸಲಾಗಿದ್ದು, ಇದನ್ನು ಎಷ್ಟು ಬೇಕೋ ಅಷ್ಟು ಎತ್ತರಕ್ಕೆ ಏರಿಸುವ ವ್ಯವಸ್ಥೆ ಮಾಡಲಾಗಿದೆ. ಮಲ್ಟಿ ಸ್ಟೇಷನ್ ಜಿಮ್‌ನಲ್ಲಿ ಒಟ್ಟಿಗೇ 10 ಜನರು ವ್ಯಾಯಾಮ ಮಾಡಬಹು ದಾಗಿದ್ದು, ಇನ್ನೂ ಅತ್ಯಾಧುನಿಕ ವ್ಯಾಯಾಮ ಉಪಕರಣ ಗಳನ್ನು ತರಿಸಲಾಗುತ್ತಿದೆ. ಮೇಲ್ಛಾ ವಣಿಯನ್ನೂ ರಿಪೇರಿ ಮಾಡಲು ಈಗಾಗಲೇ ಟೆಂಡರ್ ಕರೆದು ಅನುಮೋದನೆ ನೀಡಲಾಗಿದ್ದು, ಎರಡು ತಿಂಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ' ಎಂದು ವಿ.ವಿ. ಕ್ರೀಡಾ ನಿರ್ದೇಶಕ ಡಾ.ಪ್ರತಾಪ್ ಸಿಂಗ್ ತಿವಾರಿ `ಪ್ರಜಾವಾಣಿ'ಗೆ ತಿಳಿಸಿದರು.ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ: `ವಿಭಾಗದ ಜಿಮ್ ಉಪಕರಣಗಳನ್ನು ಉಪಯೋಗಿಸಲು ವಿ.ವಿ.ಯಲ್ಲಿ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗುವುದು.ಅಲ್ಲದೇ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಕ್ರೀಡಾಪಟು ಗಳೂ ಈಗಾಗಲೇ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಹೊರಗಿನವರು ಬಂದರೆ ಅವರಿಗೆ ಮಾಸಿಕ ನಿರ್ವಹಣೆ ಶುಲ್ಕ ಪಡೆದು ಅವಕಾಶ ನೀಡಲಾ ಗುವುದು' ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry