ಕರ್ನಾಟಕ ವೈಭವ ಗೊಂಬೆ ಉತ್ಸವ

7

ಕರ್ನಾಟಕ ವೈಭವ ಗೊಂಬೆ ಉತ್ಸವ

Published:
Updated:
ಕರ್ನಾಟಕ ವೈಭವ ಗೊಂಬೆ ಉತ್ಸವ

ಮಾಗಡಿ ರಸ್ತೆ ಮಾಚೋಹಳ್ಳಿ ಶ್ರೀ ವಿದ್ಯಾಕೇಂದ್ರದ `ದಿ ಸ್ಮಾರ್ಟ್ ಸ್ಕೂಲ್~ ದಸರಾ ಹಬ್ಬದ ಪ್ರಯುಕ್ತ ಮಂಗಳವಾರದಿಂದ ಬುಧವಾರದವರೆಗೆ (ಅ.16ರಿಂದ ಅ.24) `ಕರ್ನಾಟಕ ವೈಭವ~ ದಸರಾ ಗೊಂಬೆ ಉತ್ಸವ ಆಯೋಜಿಸಿದೆ.ಗೊಂಬೆ ಕೂರಿಸುವ ಮೂಲಕ ಮಕ್ಕಳಿಗೆ ಸಂಸ್ಕೃತಿ ಪರಿಚಯ ಮಾಡುವ ಉದ್ದೇಶವನ್ನು ಕೇಂದ್ರ ಹೊಂದಿದ್ದು, ಪ್ರತಿ ವರ್ಷ ಒಂದೊಂದು ವಸ್ತು ವಿಷಯವನ್ನಿಟ್ಟುಕೊಂಡು ಗೊಂಬೆಗಳ ಪ್ರದರ್ಶನ ಆಯೋಜಿಸುತ್ತಿದೆ.

 

ಈ ಬಾರಿ `ಕರ್ನಾಟಕ ವೈಭವ~ ಹೆಸರಿನಲ್ಲಿ ಗೊಂಬೆ ಪ್ರದರ್ಶನ ಹಮ್ಮಿಕೊಂಡಿದ್ದು, ಮಕ್ಕಳು ಮಾಡಿದ ಗೊಂಬೆಗಳು ಇಲ್ಲಿ ಗಮನ ಸೆಳೆಯುತ್ತವೆ. ಕರ್ನಾಟಕದ ಸಾಂಸ್ಕೃತಿಕ, ಜಾನಪದ, ಆಚಾರ-ವಿಚಾರ ಹಾಗೂ ವೈವಿಧ್ಯಮಯ ಕಲಾಸಂಪತ್ತು ಹಾಗೂ ಜೀವ ಜಗತ್ತನ್ನು ಗೊಂಬೆಗಳ ಮೂಲಕ ಪರಿಚಯಿಸುತ್ತಿದೆ.ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಗೊಂಬೆ ಉತ್ಸವವಿರುತ್ತದೆ. ಮಾಹಿತಿಗೆ: 94810 36865, 2853 6789

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry