ಕರ್ನಾಟಕ ಶುಭಾರಂಭ

7

ಕರ್ನಾಟಕ ಶುಭಾರಂಭ

Published:
Updated:

ಬೆಂಗಳೂರು: ಕರ್ನಾಟಕ ತಂಡದವರು ಇಲ್ಲಿ ಆರಂಭವಾದ 11ನೇ ಅಖಿಲ ಭಾರತ ಬಿಎಸ್‌ಎನ್‌ಎಲ್ ವಾಲಿಬಾಲ್ ಟೂರ್ನಿಯ `ಎ~ ಗುಂಪಿನ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದರು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ 25-7, 25-9, 25-16 ಪಾಯಿಂಟುಗಳಿಂದ ದೆಹಲಿಯ ಎಂಟಿಎನ್‌ಎಲ್ ತಂಡವನ್ನು ಮಣಿಸಿತು. ಆತಿಥೇಯ ತಂಡ ಮೂರನೇ ಸೆಟ್‌ನಲ್ಲಿ ಅಲ್ಪ ಪ್ರತಿರೋಧ ಎದುರಿಸಿತು.

`ಬಿ~ ಗುಂಪಿನ ಪಂದ್ಯದಲ್ಲಿ ತಮಿಳುನಾಡು 25-16, 25-16, 25-12ರಲ್ಲಿ ಉತ್ತರಖಾಂಡದ ಎದುರು ಗೆಲುವು ಸಾಧಿಸಿತು. `ಸಿ~ ಗುಂಪಿನಲ್ಲಿ ಬಿಹಾರ 25-15, 24-26. 25-12, 25-16ರಲ್ಲಿ ಕೇರಳ ತಂಡವನ್ನು ಸೋಲಿಸಿತು.

ಉದ್ಘಾಟನೆ: ಸೋಮವಾರ ಬಿಎಸ್‌ಎನ್‌ಎಲ್ ಕರ್ನಾಟಕ ವಲಯದ ಸಿಜೆಎಂ ಪಿ. ರಾಘವನ್ ಟೂರ್ನಿಗೆ ಚಾಲನೆ ನೀಡಿದರು. ಬೆಂಗಳೂರು ಜಿಲ್ಲೆಯ ಜನರಲ್ ಮ್ಯಾನೇಜರ್ ಶುಭೇಂದು ಘೋಷ್, ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕೆ. ನಂದ ಕುಮಾರ್ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry