ಕರ್ನಾಟಕ ಸಂಗೀತ ಕೋರ್ಸ್‌ಗೆ ಅರ್ಜಿ ಆಹ್ವಾನ

7

ಕರ್ನಾಟಕ ಸಂಗೀತ ಕೋರ್ಸ್‌ಗೆ ಅರ್ಜಿ ಆಹ್ವಾನ

Published:
Updated:

ಚೆನ್ನೈ: ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಕರ್ನಾಟಕ ಸಂಗೀತ ಡಿಪ್ಲೊಮಾ ಕೋರ್ಸ್‌ನ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಮೂರು ವರ್ಷಗಳ ಈ ಕೋರ್ಸ್‌ಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಕೋರ್ಸ್‌ನಲ್ಲಿ ಉತ್ತೀರ್ಣ ಆಗಿರುವವರು ಅರ್ಜಿ ಸಲ್ಲಿಸಲು ಅರ್ಹರು.

18ರಿಂದ 35 ವರ್ಷ ವಯೋಮಾನದೊಳಗಿನ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ವರ್ಣಂ ಮತ್ತು ಕೃತಿ ಜತೆಗೆ ಮನೋಧರ್ಮ ಸಂಗೀತದ ಕನಿಷ್ಠ ಜ್ಞಾನವನ್ನು ಅಭ್ಯರ್ಥಿಗಳು ಹೊಂದಿರುವುದು ಅವಶ್ಯ. 

ಸಂಗೀತ ಜ್ಞಾನ ಮತ್ತು ಅದರಲ್ಲಿ ಪಡೆದ ತರಬೇತಿ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವ್ಯಕ್ತಿಗತ ವಿವರ(ಬಯೋ ಡಾಟಾ) ಮತ್ತು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 23ರ ಒಳಗಾಗಿ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ಕರೆ ಕಳಿಸಲಾಗುವುದು. ಅಕಾಡೆಮಿಯ ಆಯ್ಕೆ ಸಮಿತಿ ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ನಂತರ ತಿಳಿಸಲಾಗುವುದು.

ಈ ಡಿಪ್ಲೊಮಾದ ಅವಧಿ ಮೂರು ವರ್ಷಗಳಾಗಿದ್ದು, ಪ್ರತಿ ವರ್ಷ ಎರಡು ಸೆಮಿಸ್ಟರ್‌ಗಳಿರುತ್ತವೆ. ಮೊದಲ ಸೆಮಿಸ್ಟರ್ ಅವಧಿ ಜುಲೈನಿಂದ ನವೆಂಬರ್, ಎರಡನೇ ಸೆಮಿಸ್ಟರ್ ಅವಧಿ ಜನವರಿಯಿಂದ ಜೂನ್. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ತರಗತಿಗಳಿರುತ್ತವೆ.

ಅಕಾಡೆಮಿಯ ನಿರ್ದೇಶಕಿ ಆರ್. ವೇದವಲ್ಲಿ,  ಪ್ರೊ. ರೀಟಾ ರಾಜನ್ (ಸಂಯೋಜಕಿ), ಪ್ರೊ. ಟಿ.ಆರ್. ಸುಬ್ರಮಣಿಯಂ, ಪಿ.ಎಸ್. ನಾರಾಯಣ ಸ್ವಾಮಿ, ಸುಗುಣಾ ವರದಾಚಾರಿ, ವಿ.ಸುಬ್ರಮಣಿಯಂ, ಡಾ. ಆರ್.ಎಸ್. ಜಯಲಕ್ಷ್ಮಿ, ನೇವೇಲಿ ಸಂತಾನ ಗೋಪಾಲನ್ ಮತ್ತು ಎಸ್. ಸೌಮ್ಯಾ ಅವರು ಸಂಗೀತ ಕಲಿಸಿಕೊಡುವರು.  

ಕೇವಲ ಹತ್ತು ಅಭ್ಯರ್ಥಿಗಳನ್ನು ಮಾತ್ರ ಪ್ರಥಮ ವರ್ಷದ ಡಿಪ್ಲೊಮಾ ತರಗತಿಗೆ ಆಯ್ಕೆ ಮಾಡಲಿದ್ದು, ಹೆಚ್ಚಿನ ವಿವರಗಳಿಗೆ ದಿ ಮ್ಯೂಸಿಕ್ ಅಕಾಡೆಮಿ, ಮದ್ರಾಸ್, (ಹಳೆಯ ಸಂಖ್ಯೆ-306), ಹೊಸ ಸಂಖ್ಯೆ 168, ಟಿ.ಟಿ.ಕೆ. ರಸ್ತೆ, ರಾಯ್‌ಪೇಟಾ, ಚೆನ್ನೈ 600 014. ದೂರವಾಣಿ ಸಂಖ್ಯೆ: 2811 2231/2811 5162 ಸಂಪರ್ಕಿಸಬಹುದು.

ಇ-ಮೇಲ್: music@musicacademymadras. com or pappuvenu@gmail.com  

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry