ಕರ್ನಾಟಕ, ಸಿಡ್ನಿಯಲ್ಲಿ ಭೂಕಂಪನ

7

ಕರ್ನಾಟಕ, ಸಿಡ್ನಿಯಲ್ಲಿ ಭೂಕಂಪನ

Published:
Updated:

ನವದೆಹಲಿ (ಪಿಟಿಐ): ಕರ್ನಾಟಕದ ದಕ್ಷಿಣ ಕನ್ನಡಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಲಘು ಭೂಕಂಪನ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ರಿಕ್ಟರ್ ಮಾಪಕದಲ್ಲಿ 3.9 ಪ್ರಮಾಣದ ಭೂಕಂಪನ ಮಧ್ಯಾಹ್ನ 2.22 ಗಂಟೆ ವೇಳೆಗೆ ದಕ್ಷಿಣದ ರಾಜ್ಯದಲ್ಲಿ ಸಂಭವಿಸಿತು. ಭೂಕಂಪನದ ಕೇಂದ್ರ 5 ಕಿ.ಮೀ. ಆಳದಲ್ಲಿತ್ತು ಎಂದು ಇಲ್ಲಿಗೆ ಬಂದಿರುವ ಪ್ರಾಥಮಿಕ ವರದಿ ತಿಳಿಸಿದೆ.ಭೂಕಂಪನದಿಂದ ಯಾವುದೇ ಸಾವು ನೋವಿನ ವರದಿಗಳು ತತ್ ಕ್ಷಣಕ್ಕೆ ಬಂದಿಲ್ಲ.ಸಿಡ್ನಿ ವರದಿ (ಎಎಫ್ಪಿ): ಶಾಂತ ಸಾಗರದ ಸೊಲೊಮನ್ ದ್ವೀಪಗಳಲ್ಲಿ ಭಾನುವಾರ ಸಂಜೆ ರಿಕ್ಟರ್ ಮಾಪಕದಲ್ಲಿ 5.9 ಪ್ರಮಾಣದ ಭೂಕಂಪನ ಸಂಭವಿಸಿದೆ. ಆದರೆ ಯಾವುದೇ ಸಾವು ನೋವಿನ ವರದಿ ತಕ್ಷಣಕ್ಕೆ ಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry