ಕರ್ಸ್ಟನ್ ಆಹ್ವಾನ; ಡೊನಾಲ್ಡ್ ಒಪ್ಪಿಗೆ

ಗುರುವಾರ , ಜೂಲೈ 18, 2019
28 °C

ಕರ್ಸ್ಟನ್ ಆಹ್ವಾನ; ಡೊನಾಲ್ಡ್ ಒಪ್ಪಿಗೆ

Published:
Updated:

ಜೋಹಾನ್ಸ್‌ಬರ್ಗ್ (ಐಎಎನ್‌ಎಸ್): ಗ್ಯಾರಿ ಕರ್ಸ್ಟನ್ ಅವರ ಆಹ್ವಾನದ ಮೇರೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾಗಿ ಮಾಜಿ ವೇಗಿ ಅಲೆನ್ ಡೊನಾಲ್ಡ್ ತಿಳಿಸಿದ್ದಾರೆ.ಕರ್ಸ್ಟನ್ ಅವರು ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಆಗಿ ಇತ್ತೀಚೆಗಷ್ಟೆ ನೇಮಕಗೊಂಡಿದ್ದಾರೆ.ಡೊನಾಲ್ಡ್ ಇದುವರೆಗೆ ನ್ಯೂಜಿಲೆಂಡ್ ತಂಡದ ಬೌಲಿಂಗ್ ಸಲಹೆಗಾರರಾಗಿದ್ದರು. ಆದರೆ ಅದನ್ನೀಗ ತ್ಯಜಿಸಿರುವ ಡೊನಾಲ್ಡ್ ದಕ್ಷಿಣ ಆಫ್ರಿಕಾ ತಂಡದತ್ತ ಚಿತ್ತ ಹರಿಸಿದ್ದಾರೆ.`ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲು ಆಸಕ್ತಿ ಇದೆಯೇ ಎಂದು ಕರ್ಸ್ಟನ್ 10 ದಿನಗಳ ಹಿಂದೆ ನನ್ನನ್ನು ಕೇಳಿದರು. ಅದಕ್ಕೆ ನಾನು ಒಪ್ಪಿಗೆ ಸೂಚಿಸಿದೆ~ ಎಂದು ಡೊನಾಲ್ಡ್ ಹೇಳಿದ್ದಾರೆ.`ನನ್ನ ನಾಡಿನ ಜನರೊಂದಿಗೆ ಕೆಲಸ ಮಾಡುವುದು ನನ್ನ ಕನಸು. 1991ರಲ್ಲಿ ಭಾರತ ಎದುರು ಆಡಲು ಸಜ್ಜಾಗು ಎಂದು ಅಲಿ ಬಾಕರ್ ಹೇಳಿದ್ದು ನನಗೆ ನೆನಪಾಯಿತು. ಅಕಸ್ಮಾತ್ ಕರ್ಸ್ಟನ್ ಅಲ್ಲದೇ ಬೇರೆಯವರು ಕೋಚ್ ಆಗಿದ್ದರೆ ನಾನು ಒಪ್ಪುತ್ತಿರಲಿಲ್ಲ. ಆದರೆ ನಾನು ಹಾಗೂ ಕರ್ಸ್ಟನ್ ಹಳೆಯ ಸ್ನೇಹಿತರು. ತುಂಬಾ ದಿನಗಳ ಕಾಲ ಒಟ್ಟಿಗೆ ಆಡಿದ್ದೇವೆ~ ಎಂದು ಡೊನಾಲ್ಡ್ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry