ಶುಕ್ರವಾರ, ಮೇ 29, 2020
27 °C

ಕಲಂ 371 ತಿದ್ದುಪಡಿಗೆ ಬೆಂಬಲ: ಧರ್ಮಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಕಲಂ 371 ತಿದ್ದುಪಡಿಗೆ ಪಕ್ಷಾತೀತ ಬೆಂಬಲ ನೀಡಲು ಬದ್ಧ ಎಂದು ಲೋಕಸಭಾ ಸದಸ್ಯ ಧರ್ಮಸಿಂಗ್ ತಿಳಿಸಿದರು.ಪಟ್ಟಣದ ಥೇರ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.ಇತಿಹಾಸ ಪ್ರಸಿದ್ದ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ಕಟ್ಟಡ ಕಾಮಗಾರಿಗೆ ತಮ್ಮ ನಿಧಿಯಿಂದ ರೂ.20 ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದರು.     ಹುಮನಾಬಾದ್ ವಿಧಾನಸಭಾ ಕ್ಷೇತ್ರವನ್ನು ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮಾದರಿ ಮಾಡುವ ಉದ್ದೆೀಶ ತಮ್ಮದಾಗಿದೆ ಎಂದ ಅವರು, ಕ್ಷೇತ್ರದ 14 ಗ್ರಾಮಗಳಿಗೆ ಶಾಶ್ವತ ಕುಡಿಯು ನೀರಿನ ಯೋಜನೆ ಪೂರ್ಣಗೊಳಿಸಲು ರೂ. 14 ಕೋಟಿ ಮಂಜೂರು ದೊರೆತಿದ್ದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದರು.ಜಿ.ಪಂ. ಸದಸ್ಯ ವೀರಣ್ಣ ಪಾಟೀಲ, ಮಹಾಂತಯ್ಯ ತೀರ್ಥ, ತಂಗುಬಾಯಿ ಮಾಣಿಕರಾವ, ಚಂದ್ರಮ್ಮ ಶಿವರಾಜ, ಜಗದೇವಿ ಝರಣಪ್ಪ, ಪ್ರಭುಶೆಟ್ಟಿ ಮೆಹಂಗಾ, ತಾ.ಪಂ. ಅಧ್ಯಕ್ಷ ಮಹ್ಮದ ನೂರುದ್ದಿನ್, ಪುರಸಭೆ ಅಧ್ಯಕ್ಷೆ ಪದ್ಮಾವತಿ ಮಚಕುರೆ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.