ಭಾನುವಾರ, ಅಕ್ಟೋಬರ್ 20, 2019
21 °C

ಕಲಬೆರಕೆ ಹಾಲು ನಿಷೇಧಿಸಿ

Published:
Updated:

ಬೆಂಗಳೂರು: ಹೊರ ರಾಜ್ಯಗಳಿಂದ ಬರುವ ಕಲಬೆರಕೆ ಹಾಲನ್ನು ನಿಷೇಧಿಸಬೇಕೆಂದು ಜೆಡಿಎಸ್ ರಾಜ್ಯಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೊರ ರಾಜ್ಯಗಳಿಂದ ಸಾವಿರಾರು ಲೀಟರ್‌ಗಳಷ್ಟು ಹಾಲು ಸರಬರಾಜಾಗುತ್ತಿದ್ದು ಇದರಲ್ಲಿ ಶೇಕಡಾ 22ರಷ್ಟು ಕಲಬೆರಕೆ ಹಾಲು ಬರುತ್ತಿದೆ ಎಂಬ  ಮಾಧ್ಯಮಗಳ  ವರದಿಯಿಂದ ಜನತೆ ಭಯಭೀತರಾಗಿರುವುದರಿಂದ ಸರ್ಕಾರ ಅಗತ್ಯ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

Post Comments (+)