ಕಲರ್ ಸ್ಟೈಲರ್ಸ್ ಮಳಿಗೆ

7

ಕಲರ್ ಸ್ಟೈಲರ್ಸ್ ಮಳಿಗೆ

Published:
Updated:
ಕಲರ್ ಸ್ಟೈಲರ್ಸ್ ಮಳಿಗೆ

ಈ ಕಲರ್ ಸ್ಟೈಲರ್ಸ್‌ನ ಪ್ರಮುಖ ಆಕರ್ಷಣೆಯೆಂದರೆ, ಏಕೀಕೃತ ಡೆಲ್ ಟಚ್ ಸ್ಕ್ರೀನ್. ಇದು ವರ್ಣದ ಮಾರ್ಗದರ್ಶಿ, ಡಿಸೈನರ್ ಫಿನಿಶ್ (ಒಳಾಂಗಣ ಮತ್ತು ಹೊರಾಂಗಣ), ಉತ್ಪನ್ನದ ಬಳಕೆ, ಪೂರ್ವ ವೀಕ್ಷೆಣೆಗೆ ಸಿದ್ಧವಾದ ಮಾದರಿಗಳು, ಗ್ರಾಹಕರ ಮನೆಗಳಿಗೆ ತಕ್ಕಂತೆ ಗ್ರಾಹಕೀಕೃತ ಪೂರ್ವವೀಕ್ಷಣೆಗಳನ್ನು ನೀಡುತ್ತದೆ. ಸ್ಥಳದಲ್ಲಿ ಡಿಸ್ನಿ ಗೋಡೆಗಳೊಡನೆ ಮಕ್ಕಳಿಗೆ ಆಕರ್ಷಕ ಆಟಗಳೂ ಇವೆ.`ಗ್ರಾಹಕರು ಕೇವಲ ವರ್ಣದ ಡಬ್ಬಿಗಳನ್ನಲ್ಲದೆ, ತಮ್ಮ ಮನೆಯ ಗೋಡೆಗಳಿಗೆ ಫಿನಿಶಿಂಗ್‌ಗಳನ್ನು ಕೊಳ್ಳುತ್ತಿದ್ದಾರೆ. ಫಿನಿಶ್ ಹೇಗಿರುತ್ತದೆ, ವಿವಿಧ ಬೆಳಕಿನಡಿಯಲ್ಲಿ ಬಣ್ಣವು ಹೇಗೆ ಕಾಣುತ್ತದೆ, ಯಾವ ಮೇಲ್ಮೈಗೆ ಯಾವ ಉತ್ಪನ್ನ ಹೊಂದುತ್ತದೆ, ಯಾವ ಬಣ್ಣವನ್ನು ಆರಿಸಬೇಕು ಎಂಬುದರ ಬಗ್ಗೆ ಅವರು ಕರಾರುವಾಕ್ಕಾಗಿರಬೇಕು. ಗ್ರಾಹಕರು ಸರಿಯಾದ ಆಯ್ಕೆ ಮಾಡಲು ನಮ್ಮ ಮಳಿಗೆ ಸಹಾಯ ನೀಡಲಿದೆ' ಎನ್ನುತ್ತಾರೆ ಕಾನ್ಸೈ ನೆರೊಲ್ಯಾಕ್ ವ್ಯಾಪಾರ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಸುಖ್‌ಪ್ರೀತ್ ಸಿಂಗ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry