ಕಲಾಕ್ಷೇತ್ರದಲ್ಲಿ ಕಲಾಂ

7

ಕಲಾಕ್ಷೇತ್ರದಲ್ಲಿ ಕಲಾಂ

Published:
Updated:
ಕಲಾಕ್ಷೇತ್ರದಲ್ಲಿ ಕಲಾಂ

ಸಮಾನ ಮನಸ್ಕರು ಸಂಸ್ಥೆಯ ಸಹಯೋಗದೊಂದಿಗೆ ದಾವಣಗೆರೆ ವಿದ್ಯಾಸಾಗರ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡದಿಂದ ಮಂಗಳವಾರ `ಕಲಾಂ~ ನಾಟಕ ಪ್ರದರ್ಶನ.ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ `ವಿಂಗ್ಸ್ ಆಫ್ ಫೈರ್~ ಆಧರಿತ ನಾಟಕ ಇದಾಗಿದೆ. ಜಯಪ್ರಕಾಶ್ ಪುತ್ತೂರು ಅವರು ಕನ್ನಡಕ್ಕೆ ತಂದಿದ್ದು, ಎಸ್.ಎಲ್.ಸಂತೋಷ್ ನಿರ್ದೇಶಿಸಿದ್ದಾರೆ.

 

ಮೂಲ ನಿರೂಪಣೆ ಅರುಣ್ ತಿವಾರಿ ಅವರದ್ದು. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನ ಮತ್ತು ಸಾಧನೆಗಳನ್ನು ಒಳಗೊಂಡ ರಂಗರೂಪ ಇದಾಗಿದೆ. ಕಲಾಂ ಅವರ ವ್ಯಕ್ತಿತ್ವವನ್ನು ರಂಗದ ಮೇಲೆ ಬಿಂಬಿಸಲಿದೆ.

 

ರಾಮೇಶ್ವರದ ಬೀದಿಯಲ್ಲಿ ಪತ್ರಿಕೆ ಹಂಚುತ್ತಿದ್ದ ಬಾಲಕ ಮುಂದೊಂದು ದಿನ ವಿಜ್ಞಾನಿ, ಭಾರತರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಆಗಿ ಖ್ಯಾತರಾಗುವ ಜೀವನಗಾಥೆಯ ಹೂರಣವಿದು. ಕಲಾಂ ಯುವ ಪೀಳಿಗೆಗೆ ಮಾದರಿ ವ್ಯಕ್ತಿ ಹೇಗೆ ಎಂಬುದನ್ನು ನಾಟಕ ಬಿಂಬಿಸುತ್ತದೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಸಂಜೆ 5.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry