ಕಲಾತರಂಗ ಉತ್ಸವದಲ್ಲಿ ಸಾಂಸ್ಕೃತಿಕ ಮೆರುಗು

7

ಕಲಾತರಂಗ ಉತ್ಸವದಲ್ಲಿ ಸಾಂಸ್ಕೃತಿಕ ಮೆರುಗು

Published:
Updated:

ಸಕಲೇಶಪುರ: ಇಲ್ಲಿಯ ಭೂಮಿ ಕ್ರಿಯೇಷನ್ಸ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಲಯನ್ಸ್ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ ಕಲಾತರಂಗ ಸಾಂಸ್ಕೃತಿಕ ಉತ್ಸವ ನಡೆಯಿತು.ಬೆಳಿಗ್ಗೆ 10.30ರಿಂದ ಸಂಜೆ 5ರ ವರೆಗೆ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಪ್ರತಿಭಾನ್ವಿತ ಮಕ್ಕಳು, ಯುವಕ, ಯುವತಿಯರು ಹಾಗೂ ಹಿರಿಯ ಕಲಾ ವಿದರು ಗಾಯನ, ನೃತ್ಯ, ಅಭಿನಯ, ವಾದ್ಯ, ಸಂಗೀತ, ಕವನ ವಾಚನ ಮಾಡಿದರು.ಸಂಜೆ ನಮ್ಮೂರ ದಿಗ್ಗಜರು ಪ್ರಶಸ್ತಿ ಪ್ರಧಾನ ಸಮಾರಂಭ ಚಲನಚಿತ್ರ ಹಿನ್ನೆಲೆಗಾಯಕ ಶಶಿಧರ್‌ಕೋಟೆ ಸಮ್ಮುಖದಲ್ಲಿ ನಡೆಯಿತು.ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ವಿದೇಶಾಂಗ ಕಾರ್ಯದರ್ಶಿ ಎಚ್.ಬಿ.ಮದನ್‌ಗೌಡ, ಕೃಷಿ ಪಂಡಿತ್ ಎಚ್.ಎಲ್.ನರೇಶ್, ಜಾನಪದ ಕಲಾವಿದ ತಂಬೂರಿ ತಿಮ್ಮಯ್ಯ, ತಮಟೆ ವೆಂಕಟಯ್ಯ,  ಭರತನಾಟ್ಯ ಕಲಾವಿದೆ ಕು.ಸ್ವಾತಿ ಪಿ.ಭಾರಧ್ವಜ್ ಇವರುಗಳಿಗೆ ನಮ್ಮೂರ ದಿಗ್ಗಜರು ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಎಚ್.ಎ. ಭಾಸ್ಕರ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸುಲೋಚನಾ ರಾಮಕೃಷ್ಣ, ಬಿಜೆಪಿ ಮುಖಂಡ ಜೈಮಾರುತಿ ದೇವರಾಜ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ವೇದಾವತಿ, ಪ್ರೋ.ಆಶಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ, ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ್, ಲಯನ್ಸ್ ಅಧ್ಯಕ್ಷ ಎಸ್.ಸಿ. ದಿನೇಶ್, ಲಯನೆಸ್ ಅಧ್ಯಕ್ಷೆ ಕೋಮಲ ದಿನೇಶ್, ನಂಜಮ್ಮ ಮಹಿಳಾ ಸಮಾಜ ಅಧ್ಯಕ್ಷೆ ಚನ್ನವೇಣಿ ಎಂ.ಶೆಟ್ಟಿ, ಅಕ್ಕಮ್ಮ ಇದ್ದರು.ಭೂಮಿ ಕ್ರಿಯೇಷನ್ ಸಂಚಾಲಕ ಎಚ್.ಡಿ. ಜೈಕುಮಾರ್, ಅಕ್ಕಮ್ಮ ಸಂಘದ ಅಧ್ಯಕ್ಷ ಜಯಂತ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಡಿ.ಪಾಪಣ್ಣ ಕಾರ್ಯಕ್ರಮ ನಿರೂಪಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry