ಕಲಾದಗಿ: ವಿದ್ಯಾರ್ಥಿ ದಿನ ಆಚರಣೆ

ಗುರುವಾರ , ಜೂಲೈ 18, 2019
24 °C

ಕಲಾದಗಿ: ವಿದ್ಯಾರ್ಥಿ ದಿನ ಆಚರಣೆ

Published:
Updated:

ಬಾಗಲಕೋಟೆ: `ರಾಷ್ಟ್ರದಾದ್ಯಂತ ಶಾಲಾ, ಕಾಲೇಜುಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ' ಎಂದು ಬಸವೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರೊ. ಮಹಾಂತೇಶ ಕಟಗೇರಿ ಹೇಳಿದರು.ತಾಲ್ಲೂಕು ಕಲಾದಗಿಯ ಗುರುಲಿಂಗೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಎಬಿವಿಪಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿದ್ಯಾರ್ಥಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶಂಕರ ನಿಂಬರಗಿ ಮಾತನಾಡಿ, `ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಇರಬೇಕು' ಎಂದು ಹೇಳಿದರು. ಎಚ್.ಎನ್. ನಾಯನೇಗಲಿ ಮಾತನಾಡಿದರು. ಬಸವರಾಜ ರೂಗಿ, ಸೌಮ್ಯಶ್ರಿ, ಅಶ್ವಿನಿ ಮುನವಳ್ಳಿ, ಸವಿತಾ ಹೊಸಮನಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry