ಕಲಾಧ್ಯಾನ್ ಪುರಸ್ಕಾರ

7

ಕಲಾಧ್ಯಾನ್ ಪುರಸ್ಕಾರ

Published:
Updated:

ಬೆಂಗಳೂರು ಆರ್ಟ್ ಫೌಂಡೇಷನ್: ಬುಧವಾರ ಬೆಳಿಗ್ಗೆ 10ಕ್ಕೆ ಕಲಾ ಶಿಬಿರ. ಅತಿಥಿಗಳು: ಬಿ.ಕೆ.ಎಸ್. ವರ್ಮಾ, ಡಾ.ಕೆ.ವೈ. ನಾರಾಯಣ ಸ್ವಾಮಿ, ಎಸ್.ಬಿ. ಉಪ್ಪಿನ್.ಸಂಜೆ 5.30ಕ್ಕೆ ಸೂಗೂರೇಶ ಅಸ್ಕಿಹಾಳ್ ಅವರಿಂದ ವಚನ ಗಾಯನ, ಸಂಜೆ 6.30ಕ್ಕೆ ಹಿರಿಯ ಚಿತ್ರಕಲಾವಿದ ಪ.ಸ. ಕುಮಾರ್ ಮತ್ತು ಲೋಹ ಶಿಲ್ಪಿ ಮಾನಯ್ಯ ನಾ.ಬಡಿಗೇರ ಅವರಿಗೆ ‘ಕಲಾ ಧ್ಯಾನ್’ ಪ್ರಶಸ್ತಿ ಪ್ರದಾನ, ಅತಿಥಿಗಳು: ಬರಗೂರು ರಾಮಚಂದ್ರಪ್ಪ, ಜೆ.ಎಸ್. ಖಂಡೇರಾವ್, ಚಿ.ಸು.ಕೃಷ್ಣಶೆಟ್ಟಿ, ದೇವು ಪತ್ತಾರ.ಪ.ಸ. ಕುಮಾರ್ ರಾಜ್ಯದ ಹಿರಿಯ ಕಲಾ ಪ್ರತಿಭೆ. ಇವರ ಬಣ್ಣದ ಜಗತ್ತಿನಲ್ಲಿ, ರೇಖೆಗಳ ವಿಸ್ತಾರದಲ್ಲಿ ಚಲಿಸುವ ಸುಖವೇ ಅಪರೂಪದ ಅನುಭವ. ಕಾವ್ಯದಂತೆ, ಕಥನದಂತೆ ತೆರೆದುಕೊಳ್ಳುವ ಚಿತ್ರಜಗತ್ತು ಕಣ್ತುಂಬುವಂತೆ ಮಾಡುತ್ತದೆ.ಕಲಾಶಿಬಿರಗಳ, ನೂರಾರು ಕಲಾ ಪ್ರದರ್ಶನಗಳ ಮೂಲಕ ದೇಶದಾದ್ಯಂತ ಹೆಸರು ಮಾಡಿರುವ ರಾಜ್ಯದ ಹೆಮ್ಮೆಯ ಕಲಾವಿದ ಅವರು. ಮಾನಯ್ಯ ನಾ. ಬಡಿಗೇರ ರಾಜ್ಯ ಕಂಡ ಅಪರೂಪದ ಲೋಹಶಿಲ್ಪಿ. ಪುರಾಣದ ಹಿನ್ನೆಲೆಯಿಂದ ಮೂಡಿಬರುವ ಇವರ ಶಿಲ್ಪಗಳು ಸೂಕ್ಷ್ಮತೆಯಿಂದ ಗಮನ ಸೆಳೆಯುತ್ತವೆ. ಎರಕ ತಂತ್ರ ನಿಪುಣತೆಗೆ ಹೆಸರಾದ ಇವರು ಸಾಂಪ್ರದಾಯಿಕ ಶೈಲಿಯೊಂದಿಗೆ ಜನಪದ ಶೈಲಿಯನ್ನೂ ಹದವಾಗಿ ಸಂಯೋಜಿಸಿ ಶಿಲ್ಪಗಳ ಮೆರುಗು ಹೆಚ್ಚಿಸುತ್ತಾರೆ. ಹಾಗಾಗಿ ಇವರ ಶಿಲ್ಪಗಳಿಗೆ ದೇಶದಾದ್ಯಂತ ಬೇಡಿಕೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ. ಜೆ ಸಿ ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry