ಕಲಾವಿದರನ್ನು ಗೌರವಿಸುವ ಪರಿ

7

ಕಲಾವಿದರನ್ನು ಗೌರವಿಸುವ ಪರಿ

Published:
Updated:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ ವಿವಿಧ ಪ್ರಶಸ್ತಿಗಳ  ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸದಾನಂದಗೌಡರು `ನಾವು ರಾಜ್ಯ ಆಳುವವರು;ಪ್ರಶಸ್ತಿ ಪಡೆದ ಈ ಕಲಾವಿದರು ರಾಜ್ಯದ ಜನತೆಯ ಮನಸ್ಸನ್ನು ನಿಜ ಅರ್ಥದಲ್ಲಿ ಆಳುವವರು~ ಎಂದು ಹೇಳುವ ಮೂಲಕ ಉದಾತ್ತ ಆದರ್ಶ ಮೆರೆದಿದ್ದಾರೆ (ಪ್ರವಾ. ಫೆ.22).ವರದಿಯ ಜೊತೆಗೆ ಪ್ರಕಟವಾಗಿರುವ ಸಮಾರಂಭದ ಚಿತ್ರದಲ್ಲಿ ಜನಮಾನಸವನ್ನು ಆಳುತ್ತಿರುವ ವಯೋವೃದ್ಧ ಗೌರವಾನ್ವಿತ ಕಲಾವಿದರನ್ನೆಲ್ಲ ಹಿಂದೆ ನಿಲ್ಲಿಸಿಕೊಂಡು, ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಕುರ್ಚಿಗಳಲ್ಲಿ ಕುಳಿತಿರುವುದನ್ನು ನೋಡಿದರೆ ರಾಜಕಾರಣಿಗಳು ಆಡುವ ಮಾತಿಗೂ ನಡವಳಿಕೆಗೂ ಇರುವ ವ್ಯತ್ಯಾಸ ಎಷ್ಟು ಎಂಬುದು ಗೊತ್ತಾಗುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry