ಶುಕ್ರವಾರ, ಏಪ್ರಿಲ್ 16, 2021
25 °C
ಪ್ರಜಾವಾಣಿ ವಾರ್ತೆ

ಕಲಾವಿದರು ಉತ್ಸವದಿಂದ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಾವಿದರು ಉತ್ಸವದಿಂದ ದೂರ

ಚಿತ್ರದುರ್ಗ: ನಗರದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯಲ್ಲಿ 2012-13ನೇ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಯುವಜನೋತ್ಸವದಲ್ಲಿ ಸುಮಾರು 100 ಸ್ಪರ್ಧಿಗಳು ಭಾಗವಹಿಸಿದ್ದರು. ಆದರೂ, ನಿರೀಕ್ಷಿತ ಪ್ರತಿಕ್ರಿಯೆ ಕಲಾವಿದರಿಂದ ಕಂಡು ಬರಲಿಲ್ಲ. ಇಲ್ಲಿ  ವಿಜೇತರಾದವರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಜನಪದ ಗೀತೆ, ಜನಪದ ನೃತ್ಯ, ಶಾಸ್ತ್ರೀಯ ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿತ್ತು.ಯುವಜನೋತ್ಸವ ದಲ್ಲಿ ವಿಜೇತರಾದ ಸ್ಪರ್ಧಿಗಳ  ವಿವರ ಇಂತಿದೆ:

ಜನಪದ ಗೀತೆ: ಚಿತ್ರದುರ್ಗದ ಮಾರುತಿ ಯುವಕ ಸಂಘ (ಪ್ರಥಮ), ಹೊಳಲ್ಕೆರೆ ಪಾರ್ವತಿ ಯುವತಿ ಮಂಡಳಿ (ದ್ವಿತೀಯ).

ಜಾನಪದ ನೃತ್ಯ: ಚಳ್ಳಕೆರೆಯ ರಾಘವೇಂದ್ರ ಪ್ರೌಢಶಾಲೆಯ ವಸಂತಕುಮಾರಿ ಮತ್ತು ತಂಡ (ಪ್ರಥಮ), ಚಳ್ಳಕೆರೆ ತಾಲ್ಲೂಕಿನ ಹೊಸಹಳ್ಳಿಯ ಸುಧಾ ಮತ್ತು ತಂಡ (ದ್ವಿತೀಯ).ಏಕಾಂತ ನಾಟಕ: ನಗರದ ಜೇಡರ ದಾಸಿಮಯ್ಯ ಯುವಕ ಸಂಘ (ಪ್ರಥಮ), ಹೊಸದುರ್ಗ ಪಟ್ಟಣದ ವೆಂಕಟೇಶ್ವರ ಯುವಕ ಸಂಘ (ದ್ವಿತೀಯ).ಶಾಸ್ತ್ರೀಯ ಗಾಯನ ಕರ್ನಾಟಕ:   ತ್ರಿವೇಣಿ (ಪ್ರಥಮ), ವೀರಜಾ (ದ್ವಿತೀಯ), ಅಂಜನಾದೇವಿ (ತೃತೀಯ).ಶಾಸ್ತ್ರೀಯ ಗಾಯನ ಹಿಂದೂಸ್ತಾನಿ:

ಟಿ. ತಿಪ್ಪೇರುದ್ರಯ್ಯ (ಪ್ರಥಮ), ರಿಹಾನಾ ಭಾನು (ದ್ವಿತೀಯ), ಡಿ, ಮಂಜುನಾಥ್ (ತೃತೀಯ).

ಶಾಸ್ತ್ರೀಯ ಸಂಗೀತ:  ತಬಲಾ: ಚಿತ್ರದುರ್ಗದ ಮಾರುತಿ ಯುವಕ ಸಂಘದ ರವಿಕುಮಾರ್ ಅಳಂದ (ಪ್ರಥಮ).

ಸಿತಾರ್: ಚಿತ್ರದುರ್ಗದ ಸಾಗರ ಯುವಕ ಸಂಘದ ಅರಣ್ಯಕುಮಾರ್ (ಪ್ರಥಮ).ಕೊಳಲು: ಚಿತ್ರದುರ್ಗ ತಾಲ್ಲೂಕಿನ ಹುಲ್ಲೇಹಾಳ್ ಗ್ರಾಮದ ಭಗವಾನ್ ಬುದ್ಧ ಯುವಕ ಸಂಘ ಶಿವರಾಜ್ (ಪ್ರಥಮ), ಹೊಸದುರ್ಗ ತಾಲ್ಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ಯುವಕ ಸಂಘದ ಪಿ. ರಾಜು (ದ್ವಿತೀಯ),

ವೀಣೆ: ಚಿತ್ರದುರ್ಗದ ಕೆ.ಆರ್. ಶಿಲ್ಪಾ (ಪ್ರಥಮ), ಚಿತ್ರದುರ್ಗದ ಪೂಜಾ.ಡಿ.ರಾಯ್ಕರ್ (ದ್ವಿತೀಯ).ಮೃದಂಗ: ಚಿತ್ರದುರ್ಗದ ಮಲ್ಲಿಕಾರ್ಜುನ ಯುವಕ ಸಂಘದ ಎಂ. ರಾಘವೇಂದ್ರ (ಪ್ರಥಮ), ವರುಣ್ (ದ್ವಿತೀಯ).

ಹಾರ್ಮೋನಿಯಂ: ಚಿತ್ರದುರ್ಗದ ಬಸ್ತಿಹಳ್ಳಿಯ ಸದ್ಗುರು ನರಹರಿ ಸಾಂಸ್ಕೃತಿಕ ಯುವಕ  ಡಿ. ಮಂಜುನಾಥ್ (ಪ್ರಥಮ), ತಿಪ್ಪೇರುದ್ರಯ್ಯ (ದ್ವಿತೀಯ), ಚಿತ್ರದುರ್ಗದ ಮಾರುತಿ ಯುವಕ ಸಂಘದ ರವಿಕುಮಾರ್ ಆಳಂದ (ತೃತೀಯ).

ಗಿಟಾರ್: ಹಿರಿಯೂರಿನ ಸ್ಫೂರ್ತಿ ಯುವಕ ಸಂಘ ವಿ. ಅಜಯ್ (ಪ್ರಥಮ), ಚಿತ್ರದುರ್ಗ ಸದ್ಗುರು ಯುವಕ ಸಂಘ ಬಿ, ರಾಘವೇಂದ್ರ (ದ್ವಿತೀಯ). ಶಾಸ್ತ್ರೀಯ ನೃತ್ಯ: ಭರತ ನಾಟ್ಯ: ಎಸ್‌ಜೆಎಂ ಕಾಲೇಜಿನ ಎನ್. ಶೋಭಾ (ಪ್ರಥಮ), ಚಳ್ಳಕೆರೆಯ ರಾಘವಾಂಕ ಶೈಕ್ಷಣಿಕ ಗ್ರಾಮೀಣಾಭಿವೃದ್ಧಿ ಕ್ರೀಡಾ ಯುವತಿ ಮಂಡಳಿಯ ಮಮತಾ (ದ್ವಿತೀಯ).ಮಣಿಪುರಿ: ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಡಿ. ಸೌಮ್ಯಾ (ಪ್ರಥಮ).

ಕೂಚಿಪುಡಿ: ನಗರದ ಮೇಘನಾ ಹೆಗಡೆ (ಪ್ರಥಮ), ಚಿತ್ರದುರ್ಗದ ಸೃಜನಾ ಯುವತಿ ಮಂಡಳಿಯ ಪಲ್ಲವಿ (ದ್ವಿತೀಯ).

ಕಥಕ್: ರೂಪಶ್ರೀ (ಪ್ರಥಮ), ಚಳ್ಳಕೆರೆಯ ಕಲ್ಪನಾ (ದ್ವಿತೀಯ). ಒಡಿಸ್ಸಿ: ನಗರದ ದಿವ್ಯಾಶ್ರೀ ಭಟ್ (ಪ್ರಥಮ), ಚಳ್ಳಕೆರೆಯ ಕಲ್ಪನಾ (ದ್ವಿತೀಯ).ಆಶುಭಾಷಣ: ಚಿತ್ರದುರ್ಗದ ಇಮ್ರೋನ್ ಅಹಮ್ಮದ್ ಬೇಗ್ (ಪ್ರಥಮ), ಹೊಸದುರ್ಗದ ಶ್ರಿರಾಮ ಯುವಕ ಸಂಘದ ಪುರುಷೋತ್ತಮ್ (ದ್ವಿತೀಯ).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.