ಶುಕ್ರವಾರ, ಜೂನ್ 25, 2021
27 °C

ಕಲಾವಿದರ ಒಕ್ಕೂಟಕ್ಕೆ ಮಾನ್ಯತೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೃತ್ಯ ನಿರ್ದೇಶಕ ರಾಜೇಶ್‌ ಬ್ರಹ್ಮಾವರ್ ಅವರ ನೇತೃತ್ವದ ಚಲನ­ಚಿತ್ರ ಕಲಾವಿದರ ಒಕ್ಕೂಟಕ್ಕೆ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಸುಮಾರು ಮೂವತ್ತು ಮಂದಿ ನಿರ್ಮಾಪಕರು ಕರ್ನಾ­ಟಕ ಚಲನಚಿತ್ರ ವಾಣಿಜ್ಯ ಮಂಡ­ಳಿಯ ಎದುರು ಸೋಮವಾರ ಪ್ರತಿ­ಭಟನೆ ನಡೆಸಿದರು.ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಮಾಪಕರಾದ ರೂಪಾ ಅಯ್ಯರ್‌, ದಿನೇಶ್‌ ಗಾಂಧಿ, ಬಾ.ಮಾ.­ಹರೀಶ್‌, ಶುಶೀಲ್‌ ಮುಕಾಶಿ, ಚಕ್ರ­ಪಾಣಿ ಮತ್ತಿತರರು ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ­ದರು.ಮಾನ್ಯತೆ ನೀಡಲು ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು ಒಪ್ಪ­ದಿದ್ದಾಗ ನಿರ್ಮಾಪಕರು ಅವರ ವಿರುದ್ಧ ಧಿಕ್ಕಾರ ಕೂಗಿದರು.ಗದ್ದಲದಿಂದ ಸಭೆ­ಯನ್ನು ಮೂರು ಬಾರಿ ಮುಂದೂಡಲಾಯಿತು.

‘ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡಬಾರದೆಂದು ವಾಣಿಜ್ಯ ಮಂಡಳಿಯ ನಿಯಮಗಳಲ್ಲೇನೂ ಉಲ್ಲೇಖವಿಲ್ಲ. ಆದರೆ, ಮಂಡಳಿಯ ಅಧ್ಯಕ್ಷರು ಮಾನ್ಯತೆ ನೀಡಲು ತಕರಾರು ತೆಗೆದಿದ್ದಾರೆ’ ಎಂದರು.ಇದು ಅಧ್ಯಕ್ಷರ ಏಕಪಕ್ಷೀಯ ನಿರ್ಧಾರದಂತಿದೆ. ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡುವವರೆಗೂ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ನಿರ್ಮಾಪಕ ಬಾ.ಮಾ.ಹರೀಶ್‌ ಹೇಳಿದರು.ಸದ್ಯಕ್ಕೆ ಯಾವುದೇ ನಿರ್ಧಾರವಿಲ್ಲ

ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡುವ ಸಂಬಂಧ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದು­­ಕೊಂಡಿಲ್ಲ. ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡಿದರೆ ಅಶೋಕ್‌ ನೇತೃ­ತ್ವದ ಒಕ್ಕೂಟದವರು ಚಿತ್ರ­ರಂಗ ಬಂದ್‌ಗೆ ಮುಂದಾ­ಗು­ತ್ತಾರೆ.

ಇದರಿಂದ ಸಾಕಷ್ಟು ಮಂದಿ ನಿರ್ಮಾ­ಪಕರಿಗೆ ತೊಂದರೆಯಾಗುತ್ತದೆ. ಈ ವಿಚಾರದಲ್ಲಿ ಮಂಡಳಿಯ ನಿಯಮದ ಪ್ರಕಾರ ನಾನು ನಡೆದುಕೊಳ್ಳುತ್ತೇನೆ.

– ಎಚ್‌.ಡಿ.ಗಂಗರಾಜು, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.